ತುಮಕೂರು: ಮುಸ್ಲಿಂ ಮುಖಂಡರೊಂದಿಗೆ ದೇವೇಗೌಡ, ಬಿ.ಎಂ.ಫಾರೂಕ್ ಸಮಾಲೋಚನೆ

Update: 2019-04-15 18:19 GMT

ತುಮಕೂರು,ಎ.15: ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪರವಾಗಿ ಪ್ರಚಾರ ನಡೆಸಿದ ರಾಜ್ಯ ವಿಧಾನ ಪರಿಷತ್ ಸದಸ್ಯ ಶ್ರೀ ಬಿ.ಎಂ.ಫಾರೂಕ್ ರವರು ಜಿಲ್ಲೆಯ ಪ್ರಮುಖ ಮುಸ್ಲಿಂ ಉಲಮಾ ಉಮರಾ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು.

ತುಮಕೂರು ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ದೇವೇಗೌಡರನ್ನು ದಾಖಲೆ ಮತಗಳ ಅಂತರಗಳಿಂದ ಗೆಲ್ಲಿಸುವ ಮಹತ್ತರವಾದ ಜವಾಬ್ದಾರಿಯನ್ನು ಜಿಲ್ಲೆಯ ಮುಸ್ಲಿಂ ಸಮದಾಯ ಹೊರಬೇಕಾಗಿದೆ ಎಂದು ಬಿ.ಎಂ ಫಾರೂಕು ಮುಸ್ಲಿಂ ಮುಖಂಡಪಲ್ಲಿ ಮನವಿ ಮಾಡಿದರು.

ನಾನು ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದು, ಜನ ಸಾಮಾನ್ಯರು ಮೈತ್ರಿ ಅಭ್ಯರ್ಥಿಗಳ ಪರವಾಗಿರುವುದನ್ನು ಕಂಡಿದ್ದೇನೆ. ಜನರು ತೋರಿಸುತ್ತಿರುವ ಉತ್ಸಾಹ ಮತ್ತು ನೀಡುತ್ತಿರುವ ಬೆಂಬಲಕ್ಕೆ ನಾವು ಆಬಾರಿಯಾಗಿದ್ದೇವೆ. ತುಮಕೂರು ಜಿಲ್ಲೆಯ ಪ್ರತಿಯೊಂದು ಕ್ಷೇತ್ರದಲ್ಲಿಯೂ ನನಗೆ ದೊರೆತ ಸ್ವಾಗತ ದೇವೇಗೌಡರ ಗೆಲುವನ್ನು ಸಾರಿ ಸಾರಿ ಹೇಳುತ್ತದೆ. ಜಿಲ್ಲೆಯ ಎಲ್ಲಾ ಅಭಿವೃದ್ಧಿಯ ವಿಷಯದಲ್ಲಿ ನಿಮ್ಮವನಾಗಿ ನಾನಿರುವೆನು ಎಂದು ಫಾರೂಕ್ ಭರವಸೆ ನೀಡಿದರು. 

2014ರಲ್ಲಿ ಹತ್ತಾರು ಭರವಸೆ ನೀಡಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿಜಿ ಎಲ್ಲಾ ಕ್ಷೇತ್ರಗಳಲ್ಲಯೂ ಸಂಪೂರ್ಣ ವಿಫಲರಾಗಿದ್ದಾರೆ. ಕಳೆದ 60 ನರ್ಷಗಳ ತನ್ನ ರಾಜಕೀಯ ಜೀವನದಲ್ಲಿ ಮಾನ್ಯ ದೇವೇಗೌಡರು ಸರ್ವ ಜನಾಂಗದ ಮನಗೆದ್ದು ಜನ ನಾಯಕರಾಗಿ ಮೆರೆದವರು. ಇವರಂತಹ ಮೇಧಾವಿಗಳಿಂದ ಲೊಕಸಭೆಯ ಶ್ರೇಯಸ್ಸು ಹೆಚ್ಚಲಿದೆ ಎಂದರು.

ಸಭೆಯಲ್ಲಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಮಾಜಿ ಶಾಸಕ ಶಫೀ ಅಹ್ಮದ್, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಾದ ಗೋವಿಂದ ರಾಜು, ನವೀದ್ ಬೇಗ್, ಉಬೈದುಲ್ಲಾ ಶೆರೀಫ್, ನಾಸಿರ್, ಸೆಯ್ಯದ್ ಶಾಹಿದ್, ಅಯಾಝ್ ಅಹ್ಮದ್, ಶುಹೇಬ್, ತಾಜುದ್ದೀನ್ ಶರೀಫ್ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News