ರಾಜನಾಥ್ ಸಿಂಗ್ ವಿರುದ್ಧ ‘ಅಚ್ಚರಿಯ ಅಭ್ಯರ್ಥಿ’ಯನ್ನು ಕಣಕ್ಕಿಳಿಸಿದ ಎಸ್ಪಿ

Update: 2019-04-16 16:44 GMT

ಹೊಸದಿಲ್ಲಿ, ಎ.16: ಲೋಕಸಭಾ ಚುನಾವಣಾ ಕಣ ದಿನೇ ದಿನೇ ರಂಗೇರುತ್ತಿದ್ದು, ಅಚ್ಚರಿಯ ಆಯ್ಕೆಯಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ವಿರುದ್ಧ ಸಮಾಜವಾದಿ ಪಕ್ಷವು ಶತ್ರುಘ್ನ ಸಿನ್ಹಾರ ಪತ್ನಿ ಪೂನಂ ಸಿನ್ಹಾರನ್ನು ಕಣಕ್ಕಿಳಿಸಿದೆ.

ಮಂಗಳವಾರ ಪೂನಂ ಸಿನ್ಹಾ ಪಕ್ಷದ ನಾಯಕಿ ಡಿಂಪಲ್ ಯಾದವ್ ಸಮ್ಮುಖದಲ್ಲಿ ಎಸ್ಪಿಗೆ ಸೇರ್ಪಡೆಗೊಂಡರು.

ಲಕ್ನೋ ಕ್ಷೇತ್ರದಲ್ಲಿ ಬಿಜೆಪಿಯಿಂದ ರಾಜನಾಥ್ ಸಿಂಗ್ ಕಣಕ್ಕಿಳಿಯಲಿದ್ದು, ಇದೇ ಕ್ಷೇತ್ರದಲ್ಲಿ ಎಸ್ಪಿಯಿಂದ ಪೂನಂ ಸಿನ್ಹಾ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

ಲಕ್ನೋ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರಗಳನ್ನು ಕೇವಲ ಎರಡು ದಿನಗಳು ಬಾಕಿಯಿರುವಂತೆ ಎಸ್‌ಪಿ ಮಡಿಲು ಸೇರಿದ ಪೂನಂ ಅವರನ್ನು ಎಸ್‌ಪಿ ವರಿಷ್ಠ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಕಪಾಡಿಯಾ ಅವರು ಪಕ್ಷಕ್ಕೆ ಬರಮಾಡಿಕೊಂಡರು.

ಪೂನಂ ಲಕ್ನೋ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಯಾಗಲಿದ್ದಾರೆ ಎಂದು ಹಿರಿಯ ಎಸ್‌ಪಿ ನಾಯಕ ರವಿದಾಸ ಮೆಹ್ರೋತ್ರಾ ಅವರು ತಿಳಿಸಿದರು.

ಉತ್ತರ ಪ್ರದೇಶದಲ್ಲಿಯ ಎಸ್‌ಪಿ-ಬಿಎಸ್‌ಪಿ-ಆರ್‌ಎಲ್‌ಡಿ ಮೈತ್ರಿಕೂಟವು ಲಕ್ನೋ ಕ್ಷೇತ್ರದಲ್ಲಿ ಸಿಂಗ್ ಅವರೆದುರು ತನ್ನ ಅಭ್ಯರ್ಥಿಯನ್ನಾಗಿ  ಪೂನಂ ಅವರನ್ನು ಕಣಕ್ಕಳಿಸಿಲಿದೆ ಎಂಬ ಊಹಾಪೂಹಗಳು ತುಂಬ ದಿನಗಳಿಂದ ಕೇಳಿ ಬರುತ್ತಿದ್ದವು.

69ರ ಹರೆಯದ ಮಾಜಿ ಮಾಡೆಲ್ ಪೂನಂ ಇದೇ ಮೊದಲ ಬಾರಿಗೆ ರಾಜಕೀಯವನ್ನು ಪ್ರವೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News