150 ಕೋಟಿ ವೆಚ್ಚದ ಬಗ್ಗೆ ಆಡಿಯೊ ವೈರಲ್ ಪ್ರಕರಣ; ಫೋರೆನ್ಸಿಕ್ ಲ್ಯಾಬ್ ಗೆ ಕಳುಹಿಸಲು ಸಿದ್ಧತೆ

Update: 2019-04-17 16:24 GMT

ಬೆಂಗಳೂರು, ಎ.17: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲ್ಲಿಸಲು 150 ಕೋಟಿ ಹಣ ವೆಚ್ಚ ಮಾಡುವ ಆಡಿಯೊ ವೈರಲ್ ಪ್ರಕರಣ ಸಂಬಂಧ ಐಟಿ ಅಧಿಕಾರಿಗಳು, ಆಡಿಯೋ ಟೇಪ್ ಅನ್ನು ಫೋರೆನ್ಸಿಕ್ ಲ್ಯಾಬ್ ಗೆ ಕಳುಹಿಸಲು ಸಿದ್ಧತೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ.

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು ಗೆಲ್ಲಿಸಲು 150 ಕೋಟಿ ರೂ. ಹಣ ವೆಚ್ಚ ಮಾಡುವ ಆಡಿಯೊ ವೈರಲ್ ಆಗಿತ್ತು. ಆಡಿಯೊ ವೈರಲ್ ಆಗುತ್ತಿದಂತೆ ಎಚ್ಚೆತ್ತ ಐಟಿ ಅಧಿಕಾರಿಗಳು, ಸಂಭಾಷಣೆ ನಡೆಸಿದ್ದ ಸಂಸದ ಶಿವರಾಮೇಗೌಡ ಪುತ್ರ ಚೇತನ್ ಗೌಡ ಹಾಗೂ ಜೆಡಿಎಸ್ ಮುಖಂಡ ಪಿ.ರಮೇಶ್‌ಗೆ ನೊಟೀಸ್ ನೀಡಿದ್ದರು.

ಐಟಿ ಅಧಿಕಾರಿಗಳು ಬುಧವಾರ ಚೇತನ್‌ಗೌಡ ಹಾಗೂ ಪಿ.ರಮೇಶ್ ಇಬ್ಬರನ್ನೂ ಮುಖಾಮುಖಿ ಮಾಡಿಸಿದ್ದರು. ಈ ವೇಳೆ, ಆ ಸಂಭಾಷಣೆ ನಮ್ಮದೇ ಅಂತಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಇಬ್ಬರೂ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡ ಐಟಿ ಅಧಿಕಾರಿಗಳು, ಆಡಿಯೊ ಟೇಪ್ ಅನ್ನು ಫೋರೆನ್ಸಿಕ್ ಲ್ಯಾಬ್‌ಗೆ ಕಳುಹಿಸಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News