ಸುಂಟಿಕೊಪ್ಪದಲ್ಲಿ ಕೈಕೊಟ್ಟ ಮತಯಂತ್ರ: ಮತದಾನ 1 ಗಂಟೆ ತಡವಾಗಿ ಆರಂಭ

Update: 2019-04-18 11:46 GMT

ಸುಂಟಿಕೊಪ್ಪ,ಎ.18: ಸುಂಟಿಕೊಪ್ಪದ ಸರಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆ 134 ರಲ್ಲಿ ಮತಯಂತ್ರ ಕೈಕೊಟ್ಟಿದ್ದರಿಂದ ಸರದಿ ಸಾಲಿನಲ್ಲಿ ನಿಂತಿದ್ದ 180 ಮಂದಿ ಮತದಾರರು 1 ಗಂಟೆ ತಡವಾಗಿ ಮತಚಲಾಯಿಸಿದರು.

ಮತಗಟ್ಟೆ 134ಕ್ಕೆ ಬೆಳಿಗ್ಗೆ 6.50ಕ್ಕೆ ಮತದಾರರು ಸರತಿ ಸಾಲಿನಲ್ಲಿ ಮತ ಚಲಾಯಿಸಲು ನಿಂತಿದ್ದರು. ನಿಗದಿತ ಮತದಾನದ ಸಮಯ 7 ಗಂಟೆಯಾದರೂ ಮತದಾನಕ್ಕೆ ಅಧಿಕಾರಿಗಳು ಅವಕಾಶ ಕಲ್ಪಿಸಲಿಲ್ಲ. ತಂದಿದ್ದ 3 ಯಂತ್ರಗಳಲ್ಲಿ ದೋಷ ಕಂಡಿದ್ದರಿಂದ ಚುನಾವಣಾ ಸಿಬ್ಬಂದಿಗಳು ಅದನ್ನು ಸರಿಪಡಿಸುವಲ್ಲಿ ಮಗ್ನರಾಗಿದ್ದರು. ತಾಳ್ಮೆ ಕಳಕೊಂಡ ಮತದಾರರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜಿಲ್ಲಾ ಚುನಾವಣಾಧಿಕಾರಿಗೆ ದೂರು ಸಲ್ಲಿಸುವುದಾಗಿ ಎಚ್ಚರಿಸಿದರು. ಕೊನೆಗೂ ಬೆಳಗ್ಗೆ 7.55 ಕ್ಕೆ ಮತಯಂತ್ರದ ತಾಂತ್ರಿಕ ದೋಷ ಸರಿಪಡಿಸಲು ಅಧಿಕಾರಿಗಳು ಯಶಸ್ವಿಯಾದರು. ನಂತರ ಮತದಾರರು ಮತ ಚಲಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News