ಹಾಸನದಲ್ಲಿ ಶಾಂತಿಯುತ ಮತದಾನ: ಶೇ.77.28 ರಷ್ಟು ಮತ ಚಲಾವಣೆ

Update: 2019-04-18 17:18 GMT

ಹಾಸನ, ಎ.18: ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಜಿಲ್ಲೆಯಾದ್ಯಂತ ಶಾಂತಿಯುತ ಮತದಾನವಾಗಿದ್ದು, ಮುಕ್ತಾಯಗೊಂಡಿದೆ. ಇಂದು ಬೆಳಗ್ಗೆ 7 ಗಂಟೆಗೆ ಮತಗಟ್ಟೆಗಳಲ್ಲೂ ಮತದಾನ ಪ್ರಾರಂಭವಾಯಿತಾದರೂ 9 ಗಂಟೆಯ ನಂತರವಷ್ಟೇ ಚುರುಕು ಪಡೆಯಿತು.

ಬೆಳಗ್ಗೆ 9 ಗಂಟೆವರೆಗೆ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಶೇ.7.02 ರಷ್ಟು ಮತದಾನವಾಗಿದ್ದು, ಬೆಳಗ್ಗೆ 11 ಗಂಟೆ ವೇಳೆಗೆ 23.31 ರಷ್ಟು ಮತದಾನ ಆಗಿತ್ತು.

ಮಧ್ಯಾಹ್ನ 1 ಗಂಟೆ ವೇಳೆಗೆ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಶೇ 43.49 ಮತದಾನವಾಗಿತ್ತು. ಮಧ್ಯಾಹ್ನ 3 ಗಂಟೆಗೆ ಶೇ.57.68 ಮತ ಚಲಾವಣೆಯಾಗಿತ್ತು. ಪಡುವಲ ಹಿಪ್ಪೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಡಿ ರೇವಣ್ಣ, ಶ್ರೀಮತಿ ಭವಾನಿ ರೇವಣ್ಣ ಹಾಗೂ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಮತ ಚಲಾಯಿಸಿದರು. ಬಿಜೆಪಿ ಅಭ್ಯರ್ಥಿ ಎ.ಮಂಜು ಅವರು ಹನ್ಯಾಳುವಿನಲ್ಲಿ ಮತ ಚಲಾಯಿಸಿದರು.

ಸಂಜೆ 5 ಗಂಟೆವರೆಗೆ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಶೇ 71.14 ಮತದಾನವಾಗಿತ್ತು. ರಾತ್ರಿ 9ರ ಮಾಹಿತಿ ಪ್ರಕಾರ ಶೇ.77.28 ರಷ್ಟು ಮತ ಚಲಾವಣೆಯಾಗಿದೆ.

ಶತಾಯುಷಿ: ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾರೇನಹಳ್ಳಿ ಮತಗಟ್ಟೆಯಲ್ಲಿ 103 ವರ್ಷದ ಶತಾಯುಷಿ ಕಾಳಮ್ಮ ಅವರು ತಮ್ಮ ಹಕ್ಕು ಚಲಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News