ಮದ್ಯ ಸೇವಿಸಿ ಹಿಂಸೆ ನೀಡುತ್ತಿದ್ದ ಪತಿಯನ್ನು ಕೊಲೆಗೈದ ಪತ್ನಿ

Update: 2019-04-18 17:22 GMT

ಮೈಸೂರು,ಎ.18: ಪ್ರತಿ ನಿತ್ಯ ಮಧ್ಯ ಸೇವಿಸಿ ಹಿಂಸೆ ನೀಡುತ್ತಿದ್ದ ಪತಿಯನ್ನು ಪತ್ನಿಯೇ ಕೊಲೆ ಮಾಡಿರುವ ಘಟನೆ ನಗರದ ಗುಂಡೂರಾವ್ ನಗರದಲ್ಲಿ ನಡೆದಿದೆ.

ಕೊಲೆಯಾದವನನ್ನು ವೇಣುಗೋಪಾಲ್(43) ಎಂದು ಗುರುತಿಸಲಾಗಿದೆ. ಅವರ ಪತ್ನಿ ವಿಮಲ ಪತಿಯನ್ನು ಕೊಲೆಗೈದಿದ್ದಾರೆ. ವೇಣುಗೋಪಾಲ್ ನಿತ್ಯ ಕುಡಿದು ಬಂದು ಹೊಡೆಯುತ್ತಿದ್ದು, ಜೀವನ ನಿರ್ವಹಣೆಗೆ ಹಣ ನೀಡುತ್ತಿರಲಿಲ್ಲ. ಕೂಲಿ ಮಾಡಿಕೊಂಡು ಬಂದ ಹಣವನ್ನು ಕಿತ್ತುಕೊಳ್ಳುತ್ತಿದ್ದ. ಹಾಗಾಗಿ ಕೊಲೆ ಮಾಡಿರುವುದಾಗಿ ವಿಮಲ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೀಗ ತಂದೆ ಕೊಲೆಯಾಗಿ ತಾಯಿ ಜೈಲಿಗೆ ಹೋಗಿ ಇಬ್ಬರು ಪುಟ್ಟ ಮಕ್ಕಳು ತಬ್ಬಲಿಗಳಾಗಿವೆ. ಇವರ ಸ್ಥಿತಿಯನ್ನು ಕಂಡು ಸಾರ್ವಜನಿಕರು ಕಂಬನಿ ಮಿಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News