ಮತದಾನ ಮಾಡಿದ 104 ವಯಸ್ಸಿನ ವಯೋವೃದ್ಧ

Update: 2019-04-18 17:23 GMT

ಮೈಸೂರು.ಎ.18: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಇಂದು ನಡೆದ ಮತದಾನದಲ್ಲಿ 104 ವಯಸ್ಸಿನ ವೃದ್ಧರೋರ್ವರು ಮತ ಚಲಾಯಿಸುವ ಮೂಲಕ ಮಾದರಿಯಾಗಿದ್ದಾರೆ.

ವೀರಣ್ಣ ಆರಾಧ್ಯ (104)ಎಂಬ ವಯೋವೃದ್ಧರು ನನ್ನ ಮತ ನನ್ನ ಹಕ್ಕು ಎಂದು ಉತ್ಸಾಹದಿಂದ ಮತದಾನ ಮಾಡಿದ್ದಾರೆ. ಅಗ್ರಹಾರದ ನಿವಾಸಿಯಾದ ಇವರು ಮೊಮ್ಮಗನ ಸಹಾಯದೊಂದಿದಿಗೆ ಮತಗಟ್ಟೆಗೆ ಆಗಮಿಸಿ, ಯುವಕರೂ ನಾಚುವಂತೆ ಮತ ಚಲಾಯಿಸಿದ್ದಾರೆ.

ಮೈಸೂರ ನಗರದ ಕೃಷ್ಣರಾಜ ಕ್ಷೇತ್ರದ ಮತಗಟ್ಟೆ ಸಂಖ್ಯೆ 142 ರಲ್ಲಿ ಅವರು ಮತಚಲಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News