ನರಸಿಂಹರಾಜಪುರ: ಈಜಲು ತೆರಳಿದ್ದ ನೇಪಾಳ ಮೂಲದ ಯುವಕರಿಬ್ಬರು ಮೃತ್ಯು

Update: 2019-04-21 12:14 GMT

ನರಸಿಂಹರಾಜಪುರ, ಎ.21: ಭದ್ರಾ ಹಿನ್ನೀರಿನಲ್ಲಿ ಈಜಲು ಹೋದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶನಿವಾರ ಸಂಜೆ ಜಿಲ್ಲೆಯ ನರಸಿಂಹರಾಜಪುರ ಪಟ್ಟಣದಲ್ಲಿ ವರದಿಯಾಗಿದೆ. 

ಮೃತ ಪಟ್ಟವರನ್ನು ನೇಪಾಳ ಮೂಲದ ಗೂರ್ಖಾ ವೃತ್ತಿಯ ಸಂತೋಷ್ ಹಾಗೂ ದಮ್ಮೂರ್ ಎಂದು ಗುರುತಿಸಲಾಗಿದ್ದು, ಸಂತೋಷ್ ಎನ್.ಆರ್.ಪುರ ಪಟ್ಟಣದ ಡಿಸಿಎಂಸಿ ಶಾಲೆಯ ಕಾಲೇಜು ಕಟ್ಟಡದ ಕಾವಲುಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಈತನ ಪತ್ನಿ ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ದಮ್ಮೂರ್ ಇತ್ತೀಚೆಗೆ ನೇಪಾಳದಿಂದ ಸಂಬಂಧಿ ಸಂತೋಷ್ ಮನೆಗೆ ಬಂದಿದ್ದ ಎಂದು ತಿಳಿದು ಬಂದಿದೆ.

ಶನಿವಾರ ಸಂಜೆ ಎನ್.ಆರ್.ಪುರ ಪಟ್ಟಣಕ್ಕೆ ಆಗಮಿಸಿದ್ದ ಸಂತೋಷ್ ಹಾಗೂ ದಮ್ಮೂರ್ ಮನೆಗೆ ಹಿಂದಿರುಗುತ್ತಿದ್ದಾಗ ಭದ್ರ ಹಿನ್ನೀರಿನಲ್ಲಿ ಈಜಲು ನೀರಿಗಿಳಿದಿದ್ದರು ಎನ್ನಲಾಗುತ್ತಿದ್ದು, ಈ ವೇಳೆ ಇಬ್ಬರೂ ನೀರು ಪಾಲಾಗಿದ್ದಾರೆಂದು ತಿಳಿದು ಬಂದಿದೆ. ಶನಿವಾರ ಮಧ್ಯರಾತ್ರಿ ವರೆಗೂ ಶವಗಳಿಗಾಗಿ ಶೋಧ ಕಾರ್ಯ ನಡೆಸಿದರೂ ಮೃತದೇಹ ಸಿಕ್ಕಿರಲಿಲ್ಲ. ರವಿವಾರ ಅಗ್ನಿಶಾಮಕ ದಳ ಮತ್ತು ಮುಳುಗು ತಜ್ಞರು ಮೃತದೇಹಕ್ಕೆ ಶೋಧಕಾರ್ಯ ನಡೆಸಿದ್ದು ಶವಪತ್ತೆಯಾಗಿದೆ. ಮೃತರ ಕುಟುಂಬ ವರ್ಗ ದೂರದ ರಾಜ್ಯಗಳಿಂದ ಬರಬೇಕಾಗಿದ್ದು, ಅಲ್ಲಿಯ ವರೆಗೆ ಮೃತದೇಹ ಇಡಲು ಸಕಲ ವ್ಯವಸ್ಥೆಯನ್ನು ಡಿಸಿಎಂಸಿ ಶಾಲೆಯ ಆಡಳಿತ ವರ್ಗ ಮಾಡಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News