ಮೋದಿ ದೇಶದ ಮೌಲ್ಯಗಳನ್ನು ಗಾಳಿಗೆ ತೂರಿದ್ದಾರೆ: ಎಚ್.ಕೆ.ಪಾಟೀಲ್

Update: 2019-04-21 14:46 GMT

ಗದಗ, ಎ.21: ಬಹಿರಂಗ ಪ್ರಚಾರದ ಕೊನೆಯ ದಿನವಾದ ರವಿವಾರ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ ಪಾಟೀಲ್, ಮೈತ್ರಿ ಅಭ್ಯರ್ಥಿ ಡಿ.ಅರ್‌ಪಾಟೀಲ್ ಪರವಾಗಿ ಜಿಲ್ಲೆಯಾದ್ಯಂತ ಬಿರುಸಿನ ಪ್ರಚಾರ ನಡೆಸಿದರು.

ಇಲ್ಲಿನ ಬೆಟಗೇರಿಯ ನರಸಾಪುರ ಆಶ್ರಯ ಕಾಲೋನಿಯಿಂದ ತೆಂಗಿನಕಾಯಿ ಬಜಾರ್ ವರೆಗೆ ರೋಡ್ ಶೋನಲ್ಲಿ ಪಾಲ್ಗೊಂಡು ಮಾತನಾಡಿ, ಪ್ರಧಾನಿ ಮೋದಿ ದೇಶದ ಮೌಲ್ಯಗಳನ್ನು ಗಾಳಿಗೆ ತೂರುತ್ತಿದ್ದಾರೆ. ಧರ್ಮ ಮತ್ತು ಜಾತಿಯ ಆಧಾರದ ಮೇಲೆ ದೇಶವನ್ನು ಭಜನೆ ಮಾಡಲು ಹೊರಟಿದ್ದಾರೆ. ದೇಶದ ಸೈನಿಕರ ಸಮವಸ್ತ್ರ ಧರಿಸಿ ಅದನ್ನು ಚುನವಣಾ ಪ್ರಚಾರಕ್ಕೆ ಬಳಸಿಕೊಳ್ಳುವ ಮೋದಿ ಎಷ್ಟರ ಮಟ್ಟಿಗೆ ದೇಶಪ್ರೇಮಿ ಎಂದು ಪ್ರಶ್ನಿಸಿದರು.

ದೇಶದ ಹಾಗೂ ರಾಜ್ಯದ ಅಭಿವೃದ್ದಿಗೆ ಕಾಂಗ್ರೆಸ್ ಬಹಳಷ್ಟು ಕೊಡುಗೆಯನ್ನು ನೀಡಿದೆ. ದೇಶ ಇಂದು ಇಷ್ಟು ಸಧೃಡ ಆರ್ಥಿಕತೆ ಹಾಗೂ ವಿಶ್ವದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನಮಾನ ಹೊಂದಲು ಕಾಂಗ್ರೆಸ್ ಕೊಡುಗೆ ಅಪಾರ. ಕಳೆದ 5 ವರ್ಷಗಳಲ್ಲಿ ನಿರುದ್ಯೋಗ ಸಮಸ್ಯೆ ಹಾಗೂ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಪ್ರತಿವರ್ಷ 2 ಕೋಟಿ ಉದ್ಯೋಗವನ್ನು ಸೃಷ್ಟಿಸುವ ಭರವಸೆ ನೀಡಿದ್ದ ಮೋದಿ ಆಡಳಿತದಲ್ಲಿ 1.70 ಕೋಟಿ ಉದ್ಯೋಗಗಳು ಮರೆಯಾಗಿವೆ ಎಂದು ಅವರು ಹೇಳಿದರು.

ನುಡಿದಂತೆ ನಡೆಯುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡುವ ಮೂಲಕ ಕಾಂಗ್ರೆಸನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರಲು ಮತದಾರರು ನಿರ್ಧರಿಸಬೇಕು ಎಂದು ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News