ರಾಜ್ಯದಲ್ಲಿ ಎರಡನೆ ಹಂತದ ಮತದಾನ: ಬಹಿರಂಗ ಪ್ರಚಾರ ಅಂತ್ಯ

Update: 2019-04-21 15:44 GMT

► ಸ್ಟಾರ್ ಪ್ರಚಾರಕರು ಸ್ವಕ್ಷೇತ್ರಗಳಿಗೆ ವಾಪಸ್

ಬೆಂಗಳೂರು, ಎ.21: ರಾಜ್ಯದಲ್ಲಿ ಎರಡನೆ ಹಂತದ ಚುನಾವಣೆ ಮಂಗಳವಾರ ನಡೆಯಲಿದೆ. ಈಗಾಗಲೇ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಕೊನೆಗಳಿಗೆಯಲ್ಲಿ ಮತದಾರರನ್ನು ಓಲೈಸಿಕೊಳ್ಳಲು ಅಭ್ಯರ್ಥಿಗಳು ಕಸರತ್ತು ನಡೆಸುತ್ತಿದ್ದಾರೆ.

ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ್, ಜೆಡಿಎಸ್‌ನ ವರಿಷ್ಠ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿಗಳ ಪರವಾಗಿ ವಿವಿಧ ಕಡೆಗಳಲ್ಲಿ ಈಗಾಗಲೇ ಬಹಿರಂಗ ಪ್ರಚಾರ ಅಂತ್ಯಗೊಳಿಸಿದ್ದಾರೆ. ಬಿಜೆಪಿಯ ಅಧ್ಯಕ್ಷ ಅಮಿತ್ ಶಾ, ಪ್ರಧಾನಿ ಮೋದಿ, ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಸೇರಿದಂತೆ ಹಲವರು ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ್ದಾರೆ.

ಎರಡನೇ ಹಂತದಲ್ಲಿ ಹೈವೋಲ್ಟೇಜ್ ಕ್ಷೇತ್ರಗಳೆಂದು ಬಿಂಬಿತವಾಗಿರುವ ಶಿವಮೊಗ್ಗದಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಇನ್ನು ಕಲಬುರಗಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯನ್ನು ಸೋಲಿಸಲೇಬೇಕೆಂದು ಪಣತೊಟ್ಟಿದ್ದು, ಇದು ಅತ್ಯಂತ ಪ್ರತಿಷ್ಠೆಯ ಕಣವಾಗಿದೆ. ಈ ಕ್ಷೇತ್ರಗಳ ಸೇರಿದಂತೆ 14 ಕ್ಷೇತ್ರಗಳಲ್ಲಿ ಮತದಾರರ ಮನೆಮನೆಗೆ ತೆರಳಿ ಅಭ್ಯರ್ಥಿಗಳಿಂದು ಮತಯಾಚನೆ ಮಾಡುತ್ತಿದ್ದಾರೆ.

ಕಣದಲ್ಲಿರುವ ಅಭ್ಯರ್ಥಿಗಳು:

ಬೆಳಗಾವಿ: ಸುರೇಶ್ ಅಂಗಡಿ(ಬಿಜೆಪಿ), ಡಾ.ವಿ.ಎಸ್.ಸಾಧುನವರ್(ಕಾಂಗ್ರೆಸ್)

ಬಳ್ಳಾರಿ: ವಿ.ಎಸ್.ಉಗ್ರಪ್ಪ(ಕಾಂಗ್ರೆಸ್), ವೈ.ದೇವೇಂದ್ರಪ್ಪ(ಬಿಜೆಪಿ)

ಬೀದರ್: ಈಶ್ವರ್ ಖಂಡ್ರೆ(ಕಾಂಗ್ರೆಸ್), ಭಗವತಿ ಖೂಬಾ(ಬಿಜೆಪಿ)

ವಿಜಯಪುರ: ರಮೇಶ್ ಜಿಗಜಿಣಗಿ(ಬಿಜೆಪಿ), ಡಾ.ಸುನಿತಾ ದೇವಾನಂದ ಚೌವ್ಹಾಣ್(ಜೆಡಿಎಸ್)

ಚಿಕ್ಕೋಡಿ: ಪ್ರಕಾಶ್ ಹುಕ್ಕೇರಿ(ಕಾಂಗ್ರೆಸ್), ಅಣ್ಣಾಸಾಹೇಬ್ ಶಂಕರ್ ಜೊಲ್ಲೆ(ಬಿಜೆಪಿ)

ದಾವಣಗೆರೆ: ಎಚ್.ಬಿ.ಮಂಜಪ್ಪ(ಕಾಂಗ್ರೆಸ್), ಜಿ.ಎಂ.ಸಿದ್ದೇಶ್ವರ್(ಬಿಜೆಪಿ)

ಧಾರವಾಡ: ವಿನಯ್ ಕುಲಕರ್ಣಿ(ಕಾಂಗ್ರೆಸ್), ಪ್ರಹ್ಲಾದ್ ಜೋಶಿ (ಬಿಜೆಪಿ)

ಹಾವೇರಿ: ಡಿ.ಆರ್.ಪಾಟೀಲ್(ಕಾಂಗ್ರೆಸ್), ಶಿವಕುಮಾರ್ ಉದಾಸಿ(ಬಿಜೆಪಿ)

ಕಲಬುರ್ಗಿ: ಮಲ್ಲಿಕಾರ್ಜುನ ಖರ್ಗೆ(ಕಾಂಗ್ರೆಸ್), ಡಾ.ಉಮೇಶ್ ಜಾಧವ್(ಬಿಜೆಪಿ)

ರಾಯಚೂರು: ಬಿ.ವಿ.ನಾಯಕ್(ಕಾಂಗ್ರೆಸ್), ರಾಜಾ ಅಮರೇಶ್ವರ ನಾಯಕ್(ಬಿಜೆಪಿ)

ಶಿವಮೊಗ್ಗ: ಮಧು ಬಂಗಾರಪ್ಪ(ಜೆಡಿಎಸ್), ಬಿ.ವೈ.ರಾಘವೇಂದ್ರ(ಬಿಜೆಪಿ)

ಉತ್ತರ ಕನ್ನಡ: ಅನಂತ್‌ಕುಮಾರ್ ಹೆಗಡೆ(ಬಿಜೆಪಿ), ಆನಂದ್ ಆಸ್ನೋಟಿಕರ್(ಜೆಡಿಎಸ್)

ಕೊಪ್ಪಳ: ಬಸವರಾಜ್ ಹಿಟ್ನಾಳ್(ಕಾಂಗ್ರೆಸ್), ಕರಡಿ ಸಂಗಣ್ಣ(ಬಿಜೆಪಿ)

ಬಾಗಲಕೋಟೆ: ಪಿ.ಸಿ.ಗದ್ದಿಗೌಡರ್(ಬಿಜೆಪಿ), ವೀಣಾ ಕಾಶಪ್ಪನವರ್(ಕಾಂಗ್ರೆಸ್)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News