ಅಲ್ಪ ಸಂಖ್ಯಾತರು ಮತದಾನ ಮಾಡಬಾರದೆಂದು ಕುಮ್ಮಕ್ಕು: ಡಾ.ರಝಾಕ್ ಉಸ್ತಾದ್

Update: 2019-04-22 12:45 GMT

ರಾಯಚೂರು, ಎ.22: ಅಲ್ಪಸಂಖ್ಯಾತರು ಮತದಾನ ಮಾಡಬಾರದೆಂಬ ದುರುದ್ದೇಶದಿಂದ ಬಿಜೆಪಿ ಪಕ್ಷದ ಕುಮ್ಮಕ್ಕಿನಿಂದ ತಹಶೀಲ್ದಾರರು ಮತ್ತು ಚುನಾವಣಾ ಶಿರಸ್ತೆದಾರರು ಮತದಾರರ ಪಟ್ಟಿಯನ್ನು ನಿಯಮದಂತೆ ತಯಾರು ಮಾಡದೆ ನಿರ್ಲಕ್ಷ ವಹಿಸಿದ್ದಾರೆಂದು ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಡಾ.ರಝಾಕ್ ಉಸ್ತಾದ್ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರಬ್ ಮೊಹಲ್ಲಾ ಹಾಗೂ ಗಾಲಿಬ್ ನಗರ ಮತದಾರರು ಮತದಾನ ಮಾಡದಂತೆ ತಹಶೀಲ್ದಾರ್ ಕಾರ್ಯಾಲಯದಲ್ಲಿ ಉದ್ದೇಶಪೂರ್ವಕವಾಗಿ ಮತದಾನ ಮಾಡಬಾರದೆಂದು, ಮತದಾರ ಪಟ್ಟಿಯನ್ನು ನಿಯಮದಂತೆ ರೂಪಿಸಿಲ್ಲ. ತಹಶೀಲ್ದಾರ್ ಕಾರ್ಯದಲ್ಲಿ ಮಾಡಿದ ತಪ್ಪಿನಿಂದ ಮತದಾರರು ಮತದಾನದ ಪ್ರಕ್ರಿಯೆಯಿಂದ ದೂರ ಉಳಿಯುವ ಪರಿಸ್ಥಿತಿ ಒದಗಬಹುದು ಎಂದು ವಿಷಾದಿಸಿದರು.

ಮತಗಟ್ಟೆ ಸಂಖ್ಯೆ 130ರ ಕ್ರಮ ಸಂ.3 ರಿಂದ 8 10ರವರೆಗೂ ಫೋಟೋ ಇದ್ದು, ಹೆಸರು, ತಂದೆಯ ಹೆಸರು ಮತ್ತು ಮನೆ ವಿಳಾಸ ಮಂಗಳವಾರಪೇಟೆ ಮತ್ತು ರಾಯಚೂರು ಎಂದು ನಮೂದಿಸಲಾಗಿದೆ. ವಾರ್ಡ್ 32 ರ ಮತದಾರರ ಹೆಸರು ವಾರ್ಡ್ 27ರ ಮತಗಟ್ಟೆಯಲ್ಲಿ ಬಂದಿವೆ. ವಾರ್ಡ್ ನಂ.8, 28, 7 ಮತದಾರರನ್ನು ವಾರ್ಡ್ ನಂ.7, 29, 10ರ ಮತಗಟ್ಟೆಗಳಿಗೆ ಸೇರಿಸಲಾಗಿದೆ ಎಂದು ದೂರಿದರು.

ಇದುವರೆಗೂ ಮತದಾರರ ಚೀಟಿಯನ್ನು ಮತದಾರರಿಗೆ ನೀಡಿರದ ಹಿನ್ನೆಲೆ ಬಹುತೇಕ ಮತದಾರರು ಮತದಾನ ಮಾಡಬೇಕೋ ಅಥವಾ ಇಲ್ಲವೋ ಎನ್ನುವ ಆತಂಕದಲ್ಲಿದ್ದಾರೆ. ಅಲ್ಪ ಸಂಖ್ಯಾತರು ಮತದಾನ ಮಾಡಬಾರದೆಂದು ತಹಶೀಲ್ದಾರ್ ಮತ್ತು ಶಿರಸ್ತೆದಾರರು ಷಡ್ಯಂತ್ರ ರೂಪಿಸಿ ಮತದಾರರ ಮತಗಟ್ಟೆಗಳ ಸ್ಥಳಗಳನ್ನು ಛಿದ್ರಗೊಳಿಸಿದ್ದಾರೆ. ನಾಳೆ ಮತದಾನದ ವೇಳೆಯಲ್ಲಿ ಏನಾದರೂ ಗೊಂದಲ ಉಂಟಾದಲ್ಲಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಮತದಾರರ ಪಟ್ಟಿಯಲ್ಲಿ ತಯಾರು ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿದ ತಹಶೀಲ್ದಾರ್ ಮತ್ತು ಶಿರಸ್ತೆದಾರರ ವಿರುದ್ಧ ಜಿಲ್ಲಾ ಚುನಾವಣಾಧಿಕಾರಿಗಳು ಅಮಾನತು ಮಾಡಿ ಮತದಾರರ ಪಟ್ಟಿಯನ್ನು ತಕ್ಷಣ ಸರಿಪಡಿಸುವ ಕೆಲಸ ಮಾಡಬೇಕು. ಈ ಸಂಬಂಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News