ಶ್ರೀಲಂಕಾ ದಾಳಿ: ಹೊಣೆ ಹೊತ್ತುಕೊಂಡ ಐಸಿಸ್

Update: 2019-04-23 15:37 GMT

ಕೊಲಂಬೊ, ಎ. 23: ಶ್ರೀಲಂಕಾದಲ್ಲಿ ರವಿವಾರ ನಡೆದ ಸರಣಿ ಬಾಂಬ್ ಸ್ಫೋಟಗಳ ಹೊಣೆಯನ್ನು ಭಯೋತ್ಪಾದಕ ಸಂಘಟನೆ ಐಸಿಸ್ ಹೊತ್ತುಕೊಂಡಿದೆ. ಇದಕ್ಕೂ ಮೊದಲು, ಸ್ಥಳೀಯ ಉಗ್ರಗಾಮಿ ಸಂಘಟನೆ ನ್ಯಾಶನಲ್ ತೌಹೀದ್ ಜಮಾಅತ್, ಸರಣಿ ಭಯೋತ್ಪಾದಕ ದಾಳಿಯ ಪ್ರಮುಖ ಶಂಕಿತ ಗುಂಪು ಎಂಬುದಾಗಿ ಶ್ರೀಲಂಕಾ ಸರಕಾರ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

ಆತ್ಮಹತ್ಯಾ ಬಾಂಬರ್‌ಗಳು ‘‘ಇಸ್ಲಾಮಿಕ್ ಸ್ಟೇಟ್‌ನ ಸೈನಿಕರು’’ ಎಂಬ ಸಂದೇಶವೊಂದನ್ನು ಐಸಿಸ್ ತನ್ನ ಅಧಿಕೃತ ಸುದ್ದಿ ಸಂಸ್ಥೆ ಅಲ್-ಅಮಾಕ್‌ನಲ್ಲಿ ಹಾಕಿದೆ. ಆದರೆ, ಇದನ್ನು ಸಾಬೀತುಪಡಿಸಲು ಅದು ಯಾವುದೇ ಪುರಾವೆಯನ್ನು ನೀಡಿಲ್ಲ ಎಂದು ಮಾಧ್ಯಮ ವರದಿಗಳು ಹೇಳಿವೆ.

ಇದಕ್ಕೂ ಮೊದಲು, ರವಿವಾರದ ಭಯಾನಕ ದಾಳಿಯ ಹಿಂದೆ ಐಸಿಸ್ ಇದೆ ಎಂಬುದನ್ನು ಸೂಚಿಸುವ ವೀಡಿಯೊವೊಂದನ್ನು ಐಸಿಸ್‌ಗೆ ಸೇರಿದ ಗುಂಪೊಂದು ಸಾಮಾಜಿಕ ಮಾಧ್ಯಮದಲ್ಲಿ ಹಾಕಿತ್ತು. ಆ ವೀಡಿಯೊದಲ್ಲಿ ಮೂವರು ಆತ್ಮಹತ್ಯಾ ಬಾಂಬರ್‌ಗಳ ಚಿತ್ರಗಳಿದ್ದವು.

ಶ್ರೀಲಂಕಾದಲ್ಲಿ ನಡೆದ ದಾಳಿಗಳು ಐಸಿಸ್ ಕೃತ್ಯಗಳ ಕೆಲವು ಲಕ್ಷಣಗಳನ್ನು ಹೊಂದಿವೆ ಎಂಬುದಾಗಿ ಅಮೆರಿಕದ ಗುಪ್ತಚರ ಮೂಲಗಳು ಹೇಳಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News