ಎಪ್ರಿಲ್ ಅಂತ್ಯಕ್ಕೆ ಸತತ ಮಳೆ ಸಾಧ್ಯತೆ

Update: 2019-04-25 12:53 GMT

ಬೆಂಗಳೂರು, ಎ.25: ಎಪ್ರಿಲ್ ತಿಂಗಳ ಅಂತ್ಯದಲ್ಲಿ ಚಂಡಮಾರುತವೊಂದು ರಾಜ್ಯಕ್ಕೆ ಅಪ್ಪಳಿಸಲಿದ್ದು, ಬೆಂಗಳೂರು ನಗರ ಸೇರಿದಂತೆ ಹಲವೆಡೆ ಮಹಾ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಎಪ್ರಿಲ್ 30 ರಿಂದ ಮೂರು-ನಾಲ್ಕು ದಿನಗಳ ಕಾಲ ಸತತ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿದ್ದು, ಬೆಂಗಳೂರು, ಮೈಸೂರು, ಮಂಡ್ಯ, ತುಮಕೂರು ಹಾಗೂ ಮಲೆನಾಡಿನ ಭಾಗದಲ್ಲಿ ಸೈಕ್ಲೋನ್ ಪರಿಣಾಮದಿಂದಾಗಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ತಮಿಳುನಾಡಿನ ಚೆನ್ನೈನಲ್ಲಿಯೂ ಭೀಕರ ಮಳೆಯಾಗಲಿದೆ ಎಂದು ಮೂಲಗಳು ಹೇಳಿವೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಚಂಡಮಾರುತ ಸೃಷ್ಟಿಯಾಗಲಿದ್ದು, ರಾಜ್ಯದ ಮೇಲೂ ಅದರ ಪರಿಣಾಮ ಬೀರಲಿದೆ. ಬಂಗಾಳಕೊಲ್ಲಿಯ ಕೊನೆಯಲ್ಲಿ ಶ್ರೀಲಂಕಾ ಮೇಲೆ ಮೋಡಗಳ ಸಾಲು ನಿರ್ಮಾಣಗೊಂಡಿದೆ. ಈ ಸಾಲುಗಳು ಮುಂದಿನ ಎರಡು ಮೂರು ದಿನಗಳಲ್ಲಿ ಸೈಕ್ಲೋನ್ ಆಗಿ ಪರಿವರ್ತನೆಯಾಗಲಿದೆ. ಹೀಗಾಗಿ, ಇಲ್ಲಿಯೂ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News