×
Ad

ಮಾಜಿ ಶಾಸಕ ಡಾ.ಎನ್.ಬಿ.ನಂಜಪ್ಪ ಅಂತ್ಯಸಂಸ್ಕಾರ

Update: 2019-04-28 21:55 IST

ಹಾಸನ,ಎ.28: ಜಿಲ್ಲೆಯ ಶ್ರವಣಬೆಳಗೊಳ ಕ್ಷೇತ್ರದ ಮಾಜಿ ಶಾಸಕ ಡಾ.ಎನ್.ಬಿ. ನಂಜಪ್ಪ (90) ಶನಿವಾರ ರಾತ್ರಿ ಸುಮಾರು 8:30ರ ಸಮಯದಲ್ಲಿ ಕೊನೆ ಉಸಿರು ಎಳೆದಿದ್ದು, ಚನ್ನರಾಯಪಟ್ಟಣ ತಾಲೂಕು ನೇರಲಕೇರಿಯಲ್ಲಿ ಇಂದು ಮದ್ಯಾಹ್ನ ಅಂತ್ಯಸಂಸ್ಕಾರ ನಡೆಯಿತು.    

ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೇ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ. ಇವರು ವಾತಲ್ಯ ಆಸ್ಪತ್ರೆಯ ಡಾ.ಭಾರತೀ ರಾಜಶೇಖರ್ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ.

ವಿವಿಧ ರಾಜಕಾರಣಿಗಳು ಹಾಗೂ ಹಿತೈಷಿಗಳು ವಾತ್ಸಲ್ಯ ಆಸ್ಪತ್ರೆಯಲ್ಲಿ ನಂಜಪ್ಪರವರ ಅಂತಿಮ ದರ್ಶನವನ್ನು ಪಡೆದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಡಾ.ಭಾರತೀ ರಾಜಶೇಖರ್, ಶ್ರೀ ಅದಿಚುಂಚನಗಿರಿ ಒಕ್ಕಲಿಗರ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷೆ ಜಯಲಕ್ಷ್ಮಿ, ಕೆ.ಟಿ. ಜಯಶ್ರೀ ಇತರರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News