ಎ.29 ರಿಂದ ಮೇ 25ರ ವರೆಗೆ ಹೈಕೋರ್ಟ್‌ಗೆ ರಜೆ

Update: 2019-04-28 16:27 GMT

ಬೆಂಗಳೂರು, ಎ.28: ರಾಜ್ಯ ಹೈಕೋರ್ಟ್‌ಗೆ ಎ.29ರಿಂದ ಮೇ 25ರವರೆಗೆ ರಜೆ ಇರಲಿದೆ. ಈ ಅವಧಿಯಲ್ಲಿ ವಾರದಲ್ಲಿ ಎರಡು ದಿನ ಎರಡು ವಿಭಾಗೀಯ ಹಾಗೂ ಮೂರು ಏಕಸದಸ್ಯ ರಜಾ ಕಾಲದ ವಿಶೇಷ ನ್ಯಾಯಪೀಠಗಳು ಬೆಳಗ್ಗೆ 10.30ರಿಂದ ಕಾರ್ಯ ನಿರ್ವಹಿಸಲಿವೆ.

ಬೇಸಿಗೆ ರಜೆ ಅವಧಿಯಲ್ಲಿ ಎ.30 ಹಾಗೂ ಮೇ 3ರಂದು ನ್ಯಾ.ಬಿ.ವೀರಪ್ಪ ಹಾಗೂ ನ್ಯಾ.ಆರ್.ದೇವದಾಸ್ ಅವರ ವಿಭಾಗೀಯ ನ್ಯಾಯಪೀಠ ಮತ್ತು ನ್ಯಾ.ಬಿ.ವೀರಪ್ಪ, ನ್ಯಾ.ಕೆ.ಎಸ್.ಮುದಗಲ್, ನ್ಯಾ.ಆರ್.ದೇವದಾಸ್ ಅವರ ಏಕಸದಸ್ಯ ನ್ಯಾಯಪೀಠಗಳು ಕಾರ್ಯ ನಿರ್ವಹಿಸಲಿವೆ. ಅದೇ ರೀತಿ, ಮೇ 8 ಹಾಗೂ 10ರಂದು ನ್ಯಾ.ಎನ್.ಕೆ.ಸುಧೀಂದ್ರರಾವ್ ಹಾಗೂ ನ್ಯಾ.ಎಚ್.ಟಿ.ನರೇಂದ್ರಪ್ರಸಾದ್ ಅವರ ವಿಭಾಗೀಯ ನ್ಯಾಯಪೀಠ ಮತ್ತು ನ್ಯಾ.ಜಾನ್ ಮೈಕೆಲ್ ಕುನ್ಹಾ, ನ್ಯಾ.ಮುಹಮ್ಮದ್ ನವಾಝ್, ನ್ಯಾ.ಎಚ್.ಟಿ.ನರೇಂದ್ರಪ್ರಸಾದ್ ಅವರ ಏಕಸದಸ್ಯ ನ್ಯಾಯಪೀಠಗಳು ಕಾರ್ಯನಿರ್ವಹಿಸಲಿವೆ.

ಮೇ 14 ಮತ್ತು 16ರಂದು ನ್ಯಾ.ಜಾನ್ ಮೈಕೆಲ್ ಕುನ್ಹಾ ಹಾಗೂ ನ್ಯಾ.ಎಚ್.ಟಿ.ನರೇಂದ್ರ ಪ್ರಸಾದ್ ಅವರ ವಿಭಾಗೀಯ ನ್ಯಾಯಪೀಠ ಮತ್ತು ನ್ಯಾ.ಜಾನ್ ಮೈಕೆಲ್ ಕುನ್ಹಾ, ನ್ಯಾ.ಮುಹಮ್ಮದ್ ನವಾಝ್, ನ್ಯಾ.ಎಚ್.ಟಿ.ನರೇಂದ್ರಪ್ರಸಾದ್ ಅವರ ಏಕಸದಸ್ಯ ನ್ಯಾಯಪೀಠಗಳು ಕಾರ್ಯನಿರ್ವಹಿಸಲಿವೆ. ಅದೇ ರೀತಿ, ಮೇ 21 ಮತ್ತು 23ರಂದು ನ್ಯಾ.ಎಸ್.ಸುಜಾತ ಹಾಗೂ ನ್ಯಾ.ಎಸ್.ಜಿ.ಪಂಡಿತ್ ಅವರ ವಿಭಾಗೀಯ ನ್ಯಾಯಪೀಠ ಮತ್ತು ನ್ಯಾ.ಎಸ್.ಸುಜಾತ, ನ್ಯಾ.ಎಚ್.ಬಿ.ಪ್ರಭಾಕರ್‌ಶಾಸ್ತ್ರಿ, ನ್ಯಾ.ಎಸ್.ಜಿ.ಪಂಡಿತ್ ಅವರ ಏಕಸದಸ್ಯ ನ್ಯಾಯಪೀಠಗಳು ಕಾರ್ಯ ನಿರ್ವಹಿಸಲಿವೆ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News