ಇಂಗ್ಲೀಷ್‌ನಲ್ಲಿ ದೇವೇಗೌಡರ ಜೀವನ ಚರಿತ್ರೆ ರಚನೆ!

Update: 2019-04-28 16:49 GMT

ಬೆಂಗಳೂರು, ಎ.28: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಕುರಿತು ಇಂಗ್ಲಿಷ್‌ನಲ್ಲಿ ಜೀವನ ಚರಿತ್ರೆ ಸಿದ್ಧವಾಗುತ್ತಿದ್ದು, ಶೀಘ್ರದಲ್ಲಿಯೇ ಬಿಡುಗಡೆಗೊಳ್ಳುವ ಸಾಧ್ಯತೆಯಿದೆ.

ಅವರ ಜೀವನ ಚರಿತ್ರೆಯನ್ನು ಸ್ವತಃ ಅವರೇ ಪರಿಶೀಲನೆ ಮಾಡುತ್ತಿದ್ದು, ಹಾಸನದಿಂದ ದಿಲ್ಲಿಯವರೆಗಿನ ಅವರ ರಾಜಕೀಯ ನಡೆ, ರಾಜಕೀಯ ಜೀವನದಲ್ಲಿ ನಡೆದಿರುವ ಪ್ರಮುಖ ಘಟನೆಗಳು, ಕೆಟ್ಟ ಸಂದರ್ಭಗಳು, ಮಹತ್ವದ ತಿರುವುಗಳು, ಸಾಧನೆಗಳ ಎಲ್ಲವೂ ವಿವರವಾಗಿ ಇರಲಿದೆ. ಮಾಜಿ ಶಾಸಕ ವೈ.ಎಸ್.ವಿ.ದತ್ತ ದೇವೇಗೌಡರ ಜೀವನ ಚರಿತ್ರೆಯನ್ನು ಕನ್ನಡದಲ್ಲಿ ಬರೆಯುತ್ತಿದ್ದು, ಇಂಗ್ಲೀಷ್‌ನಲ್ಲಿಯೂ ಸಿದ್ಧಗೊಳ್ಳುತ್ತಿದೆ. 

ದೇವೇಗೌಡ ಅವರು ತಮ್ಮ 88ನೇ ವಯಸ್ಸಿನಲ್ಲೂ ಉತ್ಸಾಹವನ್ನು ಬಿಡದೆ ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಅಲ್ಲದೆ, ಮೈತ್ರಿ ಅಭ್ಯರ್ಥಿಗಳ ಪರವಾಗಿ ಎಲ್ಲೆಡೆ ಉತ್ಸಾಹದಿಂದ ಪ್ರಚಾರ ನಡೆಸಿದರು. ಅಲ್ಲದೆ, ದಿಲ್ಲಿಯಲ್ಲಿ ಎಡ ಪಕ್ಷಗಳ ಮುಖಂಡರನ್ನು ಭೇಟಿ ಮಾಡಿ ರಾಜಕೀಯ ತೀರ್ಮಾನಗಳ ಕುರಿತು ಚರ್ಚಿಸಿದ್ದಾರೆ. ಹಳ್ಳಿಯಲ್ಲಿ ಹುಟ್ಟಿದ ಸಾಮಾನ್ಯ ವ್ಯಕ್ತಿ ದಿಲ್ಲಿಯಲ್ಲಿ ಅಧಿಕಾರ ಹಿಡಿದಿದ್ದರು. ಅವರ ಮುಂದಿದ್ದ ಸವಾಲುಗಳೇನಿತ್ತು ಎನ್ನುವ ಕುರಿತು ಎಲ್ಲವನ್ನೂ ಪುಸ್ತಕದಲ್ಲಿ ವಿವರಿಸಲಾಗುತ್ತಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News