ಬೈಕ್‍ಗೆ ನಾಯಿ ಢಿಕ್ಕಿ: ನಾಲ್ಕು ವರ್ಷದ ಮಗು ಸಾವು
Update: 2019-04-29 23:20 IST
ಮೈಸೂರು,ಎ.29: ಬೈಕ್ ಗೆ ನಾಯಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ನಿಯಂತ್ರಿಣಕ್ಕೆ ಸಿಗದೆ ಬೈಕಿನಲ್ಲಿದ್ದ ನಾಲ್ಕು ವರ್ಷದ ಮಗುವೊಂದು ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ನಂಜನಗೂಡು ರಸ್ತೆಯ ವಿಮಾನ ನಿಲ್ದಾಣದ ಬಳಿ ನಡೆದಿದೆ.
ಮೃತ ಬಾಲಕನನ್ನು ಕೆ.ಜಿ.ಕೊಪ್ಪಲಿನ ನಿವಾಸಿ ರವಿಕುಮಾರ್ ಹಾಗೂ ಪವಿತ್ರಾ ಅವರ ಪುತ್ರ ಧವನ್(4)ಎಂದು ಗುರುತಿಸಲಾಗಿದೆ. ರವಿಕುಮಾರ್ ಮತ್ತು ಪವಿತ್ರಾ ತಮ್ಮ ಮಗನನ್ನು ಕರೆದುಕೊಂಡು ನಂಜನಗೂಡು ರಸ್ತೆಯ ಮಂಡಕಳ್ಳಿ ವಿಮಾನ ನಿಲ್ದಾಣದ ಬಳಿ ಬೈಕಿನಲ್ಲಿ ತೆರಳುತ್ತಿದ್ದರು. ಈ ವೇಳೆ ಎದುರಿನಿಂದ ನಾಯಿಯೊಂದು ಬೈಕ್ ಗೆ ಢಿಕ್ಕಿಯಾಗಿದ್ದು, ರವಿಕುಮಾರ್ ಬೈಕ್ ನಿಯಂತ್ರಿಸಲು ಪ್ರಯತ್ನಿಸಿದರು. ಈ ವೇಳೆ ಬೈಕ್ ನಿಂದ ಕೆಳಗೆ ಬಿದ್ದ ಧವನ್ ತಲೆಗೆ ತೀವ್ರ ಪೆಟ್ಟಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಬಾಲಕ ಸಾವನ್ನಪ್ಪಿದ್ದಾನೆ.
ಈ ಸಂಬಂಧ ಮೈಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.