ಗಾಳಿ ಮಳೆಗೆ ಮರ ಉರುಳಿ ಮನೆಗೆ ಹಾನಿ
Update: 2019-04-29 23:57 IST
ಹನೂರು,ಎ.29: ಗಾಳಿ ಮಳೆಗೆ ಮಾಜಿ ತಾಲೂಕು ಪಂಚಾಯತ್ ಸದಸ್ಯನ ಮನೆ ಮೇಲೆ ಭಾರೀ ಗಾತ್ರದ ಮರವೊಂದು ಬಿದ್ದು ಹಾನಿ ಉಂಟಾಗಿರುವ ಘಟನೆ ಹನೂರು ತಾಲೂಕಿನ ಕೌದಳ್ಳಿಯಲ್ಲಿ ಸೋಮವಾರ ಸಂಜೆ ನಡೆದಿದೆ.
ತಾಲೂಕಿನ ಕೌದಳ್ಳಿ ಗ್ರಾಮದ ಮಾಜಿ ತಾಲೂಕು ಪಂಚಾಯತ್ ಸದಸ್ಯ ಅನಿಲ್ ಎಂಬವರ ಮನೆಯ ಒಂದು ಭಾಗ ಮರ ಬಿದ್ದು ಸಂಪೂರ್ಣವಾಗಿ ಜಖಂಗೊಂಡಿದೆ.
ಸೋಮವಾರ ಸಂಜೆ 3.30 ರ ವೇಳೆ ಗಾಳಿ ಮಳೆಗೆ ನೀಲಿಗಿರಿ ಮರವೊಂದು ಕೌದಳ್ಳಿ ಗ್ರಾಮದ ಅನಿಲ್ ಎಂಬುವವರ ಮನೆ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾ ಹಾನಿ ಉಂಟಾಗಿಲ್ಲ. ಮನೆಯ ಒಂದು ಭಾಗವು ಸಂಪೂರ್ಣ ಜಖಂಗೊಂಡು ಗೋಡೆ ಕುಸಿದ್ದು, ಅಪಾರ ಪ್ರಮಾಣದ ವಸ್ತುಗಳು ಹಾನಿಯಾಗಿವೆ.