ನಿರ್ಮಾಪಕ ರಾಮುಗೆ ಮೇ 10ರೊಳಗೆ ಸಾಲ ಮರುಪಾವತಿಸಲು ಕೋರ್ಟ್ ಆದೇಶ
ಬೆಂಗಳೂರು, ಎ.30: ಗಂಗಾ ಚಿತ್ರದ ಪ್ರಿ ಪ್ರೋಡಕ್ಷನ್ ವೇಳೆ ಪಡೆದುಕೊಂಡಿದ್ದ ಸಾಲವನ್ನು ಮರುಪಾವತಿ ಮಾಡಲು ನಿರ್ದೇಶಿಸಲು ಹಾಗೂ ನಟ ಗಣೇಶ್ ಅಭಿನಯದ 99 ಚಿತ್ರಕ್ಕೆ ತಡೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರ್ಮಾಪಕ ರಾಮುಗೆ ಮೇ 10ರೊಳಗೆೆ ಸಾಲ ಮರು ಪಾವತಿಸಲು ಆದೇಶಿಸಿದೆ. ಆದರೆ, ಚಿತ್ರದ ತಡೆಗೆ ನಿರಾಕರಿಸಿದೆ.
ಲಕ್ಷ್ಮೀ ಫೈನಾನ್ಸ್, ಪಲ್ಲವಿ ಚಿತ್ರಮಂದಿರದ ಮಾಲಕ ಹರೀಶ್‌ಕುಮಾರ್ 99 ಚಿತ್ರಕ್ಕೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದರು. ನ್ಯಾಯಪೀಠವು ವಿಚಾರಣೆ ನಡೆಸಿ ಚಿತ್ರದ ತಡೆಗೆ ನಿರಾಕರಿಸಿ, ಸಾಲ ಮರು ಪಾವತಿಸಲು ಆದೇಶಿಸಿತು.
ರಾಮು ಪರ ವಾದಿಸಿದ ವಕೀಲರು, 99 ಚಿತ್ರ ಮೊದಲು ಬಿಡುಗಡೆಯಾಗಲಿ ಅದರಿಂದ ಬಂದ ಹಣದಲ್ಲಿ ರಾಮು ಅವರು ಸಾಲವನ್ನು ಮರು ಪಾವತಿಸುತ್ತಾರೆ. ಯಾವುದೇ ಕಾರಣಕ್ಕೂ ಚಿತ್ರದ ಬಿಡುಗಡೆಗೆ ತಡೆ ನೀಡಬಾರದು ಎಂದು ಪೀಠಕ್ಕೆ ಮನವಿ ಮಾಡಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಚಿತ್ರದ ತಡೆ ನಿರಾಕರಿಸಿ, ಸಾಲವನ್ನು ಮೇ 10ರೊಳಗೆ ಮರುಪಾವತಿಸಲು ಆದೇಶಿಸಿತು.