×
Ad

ಎಸೆಸೆಲ್ಸಿ ಪರೀಕ್ಷೆ: ಚಿಕ್ಕಮಗಳೂರು ಜಿಲ್ಲೆಗೆ ಶೇ.82 ಫಲಿತಾಂಶ; ರಾಜ್ಯದಲ್ಲಿ 14ನೇ ಸ್ಥಾನ

Update: 2019-04-30 23:52 IST

ಚಿಕ್ಕಮಗಳೂರು, ಎ.30: ಕಳೆದ ಮಾರ್ಚ್‍ನಲ್ಲಿ ನಡೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಶೇ.82.76 ಫಲಿತಾಂಶ ಲಭಿಸಿದ್ದು, ಕಳೆದ ವರ್ಷ 26ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ ರಾಜ್ಯದಲ್ಲಿ 14ನೇ ಸ್ಥಾನದಲಿದೆ. ಜಿಲ್ಲೆಯಲ್ಲಿ ಈ ಬಾರಿಯ ಎಸೆಸೆಲ್ಸಿ ಫಲಿತಾಂಶದಲ್ಲಿ ಕಳೆದ ಸಾಲಿಗಿಂತ ಶೇ.10.29ರಷ್ಟು ಫಲಿತಾಂಶ ಹೆಚ್ಚಳವಾಗಿರುವುದು ಉತ್ತಮ ಬೆಳವಣಿಗೆಯಾಗಿದೆ.

ಜಿಲ್ಲೆಯಲ್ಲಿ ಒಟ್ಟು  5,993 ಬಾಲಕರು ಮತ್ತು 6112 ಬಾಲಕಿಯರು ಸೇರಿದಂತೆ ಒಟ್ಟು 12,105 ವಿದ್ಯಾರ್ಥಿಗಳು ಕುಳಿತಿದ್ದು, ಇವರಲ್ಲಿ 4,895 ಬಾಲಕರು ಹಾಗೂ 5238 ಬಾಲಕಿಯರು ಸೇರಿದಂತೆ ಒಟ್ಟು 10,133 ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ.82.76% ರಷ್ಟು ಫಲಿತಾಂಶ ದೊರೆತಿದೆ. ಕಳೆದ ವರ್ಷ ಜಿಲ್ಲೆಯು ರಾಜ್ಯದಲ್ಲಿ 26ನೇ ಸ್ಥಾನ ಹೊಂದಿತ್ತು. ಜಿಲ್ಲೆಯಲ್ಲಿ ಶೇ.90.96ರಷ್ಟು ಫಲಿತಾಂಶ ಪಡೆದು ಶೃಂಗೇರಿ ಬ್ಲಾಕ್ ಪ್ರಥಮ ಸ್ಥಾನದಲ್ಲಿದ್ದು, ಶೇ.74.06ರಷ್ಟು ಫಲಿತಾಂಶ ಪಡೆದು 8ನೇ ಸ್ಥಾನದಲ್ಲಿರುವ ಚಿಕ್ಕಮಗಳೂರು ಬ್ಲಾಕ್ ಕಡೆಯ ಸ್ಥಾನದಲ್ಲಿದೆ.

ಬ್ಲಾಕ್‍ವಾರು ಫಲಿತಾಂಶದ ವಿವರದನ್ವಯ ಬೀರೂರು ಬ್ಲಾಕ್‍ನಲ್ಲಿ ಪರೀಕ್ಷೆಗೆ ಕುಳಿತಿದ್ದ ಒಟ್ಟು 1361 ವಿದ್ಯಾರ್ಥಿಗಳ ಪೈಕಿ 1104 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶೇಕಡ 81.12ರಷ್ಟು ಫಲಿತಾಂಶ ಪಡೆದು ಐದನೇ ಸ್ಥಾನದಲ್ಲಿದೆ. ಚಿಕ್ಕಮಗಳೂರು ಬ್ಲಾಕ್‍ನಲ್ಲಿ ಪರೀಕ್ಷೆಗೆ ಕುಳಿತ್ತಿದ್ದ ಒಟ್ಟು 3740 ವಿದ್ಯಾರ್ಥಿಗಳ ಪೈಕಿ 2770 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ, ಶೇ.74.06 ಫಲಿತಾಂಶ ಪಡೆದು ಜಿಲ್ಲೆಯಲ್ಲಿ ಎಂಟನೇ ಸ್ಥಾನದಲ್ಲಿದೆ. ಕಡೂರು ಬ್ಲಾಕ್‍ನಲ್ಲಿ ಪರೀಕ್ಷೆಗೆ ಕುಳಿತಿದ್ದ ಒಟ್ಟು 2455 ವಿದ್ಯಾರ್ಥಿಗಳ ಪೈಕಿ 1917 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.78.09 ರಷ್ಟು ಫಲಿತಾಂಶ ಪಡೆದು ಆರನೇ ಸ್ಥಾನದಲ್ಲಿದೆ. ತರೀಕೆರೆ ಬ್ಲಾಕ್‍ನಲ್ಲಿ ಪರೀಕ್ಷೆಗೆ ಕುಳಿತಿದ್ದ ಒಟ್ಟು 1951 ವಿದ್ಯಾರ್ಥಿಗಳ ಪೈಕಿ 1493 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶೇ.76.52 ರಷ್ಟು ಫಲಿತಾಂಶ ಪಡೆದು ಏಳನೇ ಸ್ಥಾನದಲ್ಲಿದೆ. ನರಸಿಂಹರಾಜಪುರ ಬ್ಲಾಕ್‍ನಲ್ಲಿ ಪರೀಕ್ಷೆಗೆ ಕುಳಿತ್ತಿದ್ದ ಒಟ್ಟು 1004 ವಿದ್ಯಾರ್ಥಿಗಳ ಪೈಕಿ 820 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಶೇ.72.84ರಷ್ಟು ಫಲಿತಾಂಶ ಪಡೆದು ನಾಲ್ಕನೇ ಸ್ಥಾನದಲ್ಲಿದೆ. 

ಕೊಪ್ಪ ಬ್ಲಾಕ್‍ನಲ್ಲಿ ಪರೀಕ್ಷೆಗೆ ಕುಳಿತಿದ್ದ 1026  ವಿದ್ಯಾರ್ಥಿಗಳ ಪೈಕಿ 881 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶೇ.85.87 ರಷ್ಟು ಫಲಿತಾಂಶ ಪಡೆದು ಎರಡನೇ ಸ್ಥಾನದಲ್ಲಿದೆ.  ಶೃಂಗೇರಿ ಬ್ಲಾಕ್‍ನಲ್ಲಿ ಪರೀಕ್ಷೆಗೆ ಕುಳಿತಿದ್ದ ಒಟ್ಟು 575  ವಿದ್ಯಾರ್ಥಿಗಳ ಪೈಕಿ 523 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶೇಕಡ 90.96 ರಷ್ಟು ಫಲಿತಾಂಶ ಪಡೆದು ಒಂದನೇ ಸ್ಥಾನದಲ್ಲಿದೆ. ಮೂಡಿಗೆರೆ ಬ್ಲಾಕ್‍ನಲ್ಲಿ ಪರೀಕ್ಷೆಗೆ ಕುಳಿತಿದ್ದ ಒಟ್ಟು 1317 ವಿದ್ಯಾರ್ಥಿಗಳ ಪೈಕಿ 1087 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶೇ.82.54 ರಷ್ಟು ಫಲಿತಾಂಶ ದೊರೆತು ಮೂರನೇ ಸ್ಥಾನದಲ್ಲಿದೆ.  
ಜಿಲ್ಲೆಯಲ್ಲಿ 61 ಪ್ರೌಢಶಾಲೆಗಳು ಶೇ.100ಕ್ಕೆ 100ರಷ್ಟು ಫಲಿತಾಂಶ ಪಡೆದಿವೆ.

ಚಿಕ್ಕಮಗಳೂರು ತಾಲೂಕಿನ ಸಂತಮೇರಿಸ್ ಪ್ರೌಢಶಾಲೆಯ ಯುಕ್ತ.ಜಿ.ಸ್ವಾಮಿ ರವರು 622 ಅಂಕಗಳನ್ನು ಪಡೆದು ಜಿಲ್ಲೆಗೆ ಮೊದಲ ಸ್ಥಾನವಿದ್ದರೆ, ಚಿಕ್ಕಮಗಳೂರು ತಾಲೂಕಿನ ಸಂತಮೇರಿಸ್ ಪ್ರೌಢಶಾಲೆಯ ಭೂಮಿಕ ನಾಯ್ಡು.ಸಿ.ಆರ್ ಹಾಗೂ ಎನ್.ಆರ್.ಪುರದ ಸರ್ಕಾರಿ ಪ್ರೌಢಶಾಲೆಯ ತನುಶ್ರೀ ಸಮಾನವಾಗಿ 621 ಅಂಕಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಹಾಗೂ ಎನ್.ಆರ್.ಪುರ ತಾಲೂಕಿನ ಡಿ.ಸಿ.ಎಂ.ಸಿ ಮೆಮೋರಿಯಲ್ ಪ್ರೌಢಶಾಲೆಯ ಪರೀಕ್ಷಿತ್.ಕೆ.ಕೆ ಮತ್ತು ಪೂರ್ಣಪ್ರಜ್ಞ ಪ್ರೌಢಶಾಲೆಯ ಘೋದಾ ರಮೇಶ್ ಸಮಾನವಾಗಿ 619 ಅಂಕಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದಾರೆ. ಚಿಕ್ಕಮಗಳೂರಿನ ಆದಿಚುಂಚನಗಿರಿ ಶಾಲೆಯ ಸಹನ ಎ.ಎಸ್ 618 ಸ್ಥಾನ ಪಡೆದು ನಾಲ್ಕನೇ ಸ್ಥಾನದಲ್ಲಿದ್ದರೆ. ಮೂಡಿಗೆರೆ ಬೇಥನಿ ಪ್ರೌಢಶಾಲೆಯ ಸಾಧನಾ.ಕೆ.ಎಸ್, ಶೃಂಗೇರಿಯ ದರ್ಶಿನಿ ಪ್ರೌಢಶಾಲೆಯ ಸಂಜನ ಹೆಚ್.ಕೆ ಹಾಗೂ ಚಿಕ್ಕಮಗಳೂರು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಚೈತನ್ಯ.ಬಿ. ರವರುಗಳು ಸಮಾನವಾಗಿ 617 ಅಂಕಗಳನ್ನು ಗಳಿಸಿ ಐದನೇ ಸ್ಥಾನದಗಳಲ್ಲಿದ್ದರೆ, ಎಂ.ಇ.ಎಸ್ ಪ್ರಯೋಗಿಕ ಪ್ರೌಢಶಾಲೆಯ ಸುಮಿತ ಚಂದ್ರ 616 ಅಂಕಗಳು ಪಡೆದು ಆರನೇ ಸ್ಥಾನದಲ್ಲಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News