×
Ad

ನಾಲೆಗೆ ಈಜಲು ಹೋದ ಬಾಲಕ ನೀರುಪಾಲು

Update: 2019-05-01 00:00 IST

ಮಂಡ್ಯ, ಎ.30: ನಾಲೆಯಲ್ಲಿ ಈಜಲು ತೆರಳಿದ್ದ ಬಾಲಕನೋರ್ವ ನೀರುಪಾಲಾದ ಘಟನೆ ದುದ್ದ ಹೋಬಳಿಯ ಗುನ್ನಾಯಕನಹಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ. 

ನಾಗಮಂಗಲ ತಾಲೂಕಿನ ಪಾಲಅಗ್ರಹಾರ ಗ್ರಾಮದ ರವಿ ಎಂಬುವರ ಪುತ್ರ ಹೇಮಂತ್‍ಗೌಡ (15) ಮೃತ ಬಾಲಕ ಎಂದು ತಿಳಿದು ಬಂದಿದೆ.
ಮದ್ದೂರು ತಾಲೂಕಿನ ಶಿವಾರ ಗುಡ್ಡದಲ್ಲಿರುವ ಜವಾಹರ ನವೋದಯ ವಿದ್ಯಾಲಯದಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಹೇಮಂತ್‍ಗೌಡ ಸ್ನೇಹಿತರ ಜತೆ ಪ್ರವಾಸಕ್ಕೆ ತೆರಳಿದ್ದಾಗ ಈ ಘಟನೆ ಸಂಭವಿಸಿದೆ.

ಮೇಲುಕೋಟೆ ಚಲುವನಾರಾಯಣನ ದರ್ಶನ ಮುಗಿಸಿಕೊಂಡು ಗುನ್ನಾಯಕನಹಳ್ಳಿ ಗ್ರಾಮದ ಸ್ನೇಹಿತ ಗುಣಶೀಲಗೌಡನ ಮನೆಗೆ ಹೋಗುತ್ತಿದ್ದಾಗ ಕಾಲುವೆಯಲ್ಲಿ ಈಜಲು ಇಳಿದಾಗ ಹೇಮಂತ್‍ಗೌಡ ಕೊಚ್ಚಿಕೊಂಡು ಹೋಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News