×
Ad

ಮೇಲ್ಮನವಿ ಸಲ್ಲಿಸದಿರಲು ಲಂಚ: ಸರಕಾರಿ ಅಭಿಯೋಜಕಿ ಎಸಿಬಿ ಬಲೆಗೆ

Update: 2019-05-01 00:03 IST

ತಿಪಟೂರು:ನ್ಯಾಯಾಲಯದಲ್ಲಿ ವಜಾಗೊಂಡಿದ್ದ ಕೇಸೊಂದರ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಹೆದರಿಸಿ ಎದುರುದಾರರಿಂದ ಸರಕಾರಿ ಅಭಿಯೋಜಕರು ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಸಿಕ್ಕಿ ಬಿದ್ದಿರುವ ಘಟನೆ ತಿಪಟೂರಿನಲ್ಲಿ ನಡೆದಿದೆ.

ಶ್ರೀಮತಿ ಪೂರ್ಣಿಮ ಎಸಿಬಿ ಬಲೆಗೆ ಬಿದ್ದ ಸರಕಾರಿ ಅಭಿಯೋಜಕರಾಗಿದ್ದಾರೆ.ತಿಪಟೂರು ನ್ಯಾಯಾಲಯದಲ್ಲಿ ಸರಕಾರಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ತಿಪಟೂರಿನ ಗಾಂಧಿನಗರದಲ್ಲಿ 2015ರಲ್ಲಿ ನಡೆದ ಪ್ರಕರಣವೊಂದರ ಬಗ್ಗೆ ಸ್ಥಳೀಯ ನ್ಯಾಯಾಲಯದಲ್ಲಿ ಬಂದ ತೀರ್ಪಿನ ವಿರುದ್ದ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಹೆದರಿಸಿ 40 ಸಾವಿರ ರೂ ಲಂಚದ ಬೇಡಿಕೆ ಇಟ್ಟಿದ್ದು, ಇದರಲ್ಲಿ 10 ಸಾವಿರ ರೂ.ಗಳನ್ನು ಮಧ್ಯವರ್ತಿಗಳಿಂದ ಪಡೆಯುವ ವೇಳೆ ಲೋಕಾಯುಕ್ತ ಪೋಲಿಸರು ದಾಳಿ ನಡೆಸಿ, ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.

2015 ರಲ್ಲಿ ತಿಪಟೂರಿನ ಗಾಂಧಿನಗರದಲ್ಲಿ ಮರದ ಕೊಂಬೆ ವಿದ್ಯುತ್ ಲೈನ್ ಮೇಲೆ ಬಿದಿದ್ದು, ಇದನ್ನು ತೆರೆವುಗೊಳಿಸುವ ಸಂದರ್ಭದಲ್ಲಿ ಮರದ ಕೊಂಬೆ ವೃದ್ದೆಯೊಬ್ಬರ ಮೇಲೆ ಬಿದ್ದು, ಅವರ ಕಾಲು ಮುರಿದಿತ್ತು. ಈ ಸಂಬಂಧ ಅರಣ್ಯ ಇಲಾಖೆ ಮತ್ತು ಬೆಸ್ಕಾಂ ಸಿಬ್ಬಂದಿ ವಿರುದ್ದ ಕೇಸು ದಾಖಲಾಗಿತ್ತು. ಸದರಿ ಕೇಸಿನ ವಿಚಾರಣೆ ನಡೆದು ನ್ಯಾಯಾಲಯದಲ್ಲಿ ಕೇಸು ವಜಾಗೊಂಡಿದ್ದು,ಲಂಚ ನೀಡದಿದ್ದರೆ ಈ ಕೇಸಿನ ವಿಚಾರವಾಗಿ ಮೇಲಿನ ನ್ಯಾಯಾಲಯ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಮಧ್ಯವರ್ತಿಗಳ ಮೂಲಕ 40 ಸಾವಿರ ರೂಗಳ ಲಂಚದ ಬೇಡಿಕೆ ಇಟ್ಟಿದ್ದು,ಈ ಸಂಬಂದ ಎದುರುದಾರರ ಖಾತೆಯಿಂದ 20 ಸಾವಿರ ರೂಗಳನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News