ಎಸೆಸೆಲ್ಸಿ ಫಲಿತಾಂಶ: 11ನೇ ಸ್ಥಾನ ಪಡೆದ ಹನೂರು ಶೈಕ್ಷಣಿಕ ವಲಯ
ಹನೂರು : ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ಹನೂರು ಶೈಕ್ಷಣಿಕ ವಲಯ 11ನೇ ಸ್ಥಾನ ಪಡೆದು ಉತ್ತಮ ಸಾಧನೆಗೈದಿದ್ದು ಚಾಮರಾಜನಗರ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆಯುವುದರ ಜೊತೆಗೆ ಶೈಕ್ಷಣಿಕ ವಲಯದ ವಿದ್ಯಾರ್ಥಿಗಳು ಜಿಲ್ಲೆಯಲ್ಲಿಯೇ 2ನೇ ಮತ್ತು 3ನೇ ಸ್ಥಾನ ಪಡೆಯುವ ಮೂಲಕ ಜಿಲ್ಲೆಗೆ ಹಾಗೂ ಹನೂರು ವಲಯಕ್ಕೆ ಕೀರ್ತಿ ತಂದಿದ್ದಾರೆ.
ಸತತ 4ನೇ ಬಾರಿಗೆ ಪ್ರಥಮ ಸ್ಥಾನ: ಹನೂರು ಶೈಕ್ಷಣಿಕ ವಲಯವು ಈಬಾರಿಯೂ ಚಾಮರಾಜನಗರ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು ಸತತ 4ನೇ ಬಾರಿಗೆ ಪ್ರಥಮ ಸ್ಥಾನ ಉಳಿಸಿಕೊಂಡ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ
ರಾಜ್ಯದಲ್ಲಿಯೇ 11ನೇ ಸ್ಥಾನ: ಹನೂರು ಶೈಕ್ಷಣಿಕ ವಲಯವು ರಾಜ್ಯದ 205 ತಾಲ್ಲೂಕುಗಳ ಪೈಕಿ 11ನೇ ಸ್ಥಾನ ಪಡೆದಿದೆ. 2016-17ನೇ ಸಾಲಿನಲ್ಲಿ ರಾಜ್ಯದಲ್ಲಿಯೇ 8ನೇ ಸ್ಥಾನ ಪಡೆದಿದ್ದು ಸಾಧನೆಯಾಗಿತ್ತು. ಆದರೆ ಕಳೆದ ಸಾಲಿನಲ್ಲಿ 2017-18ನೇ ಸಾಲಿನಲ್ಲಿ 23ನೇ ಸ್ಥಾನ ಪಡೆಯುವ ಮೂಲಕ ಕೊಂಚ ಹಿನ್ನೆಡೆ ಅನುಭವಿಸಲಾಗಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಮತ್ತೊಮ್ಮೆ ಶೈಕ್ಷಣಿಕ ವಲಯವು ಉತ್ತಮ ಸಾಧನೆಗೈದಿದ್ದು 11ನೇ ಸ್ಥಾನ ಪಡೆದಿದೆ.