×
Ad

ಬಿಜೆಪಿಗೆ ಮತ ಚಲಾಯಿಸಿದ್ದರಿಂದ ದಕ್ಷಿಣ ಕನ್ನಡಕ್ಕೆ ಎಸೆಸೆಲ್ಸಿಯಲ್ಲಿ 5ನೇ ಸ್ಥಾನ: ಸಚಿವ ರೇವಣ್ಣ ವ್ಯಂಗ್ಯ

Update: 2019-05-01 17:44 IST

ಹಾಸನ, ಮೇ 1: ಬಿಜೆಪಿಗೆ ಮತ ಚಲಾಯಿಸಿದ್ದರಿಂದ ದಕ್ಷಿಣ ಕನ್ನಡಕ್ಕೆ ಎಸೆಸೆಲ್ಸಿ ಫಲಿತಾಂಶದಲ್ಲಿ 5ನೇ ಸ್ಥಾನ ಬಂದಿದೆ ಎಂದು ಸಚಿವ ಎಚ್.ಡಿ. ರೇವಣ್ಣ ವ್ಯಂಗ್ಯವಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ರೇವಣ್ಣ ಅವರು ಹಾಸನ ಜಿಲ್ಲೆಗೆ ದೈವಾನುಗ್ರಹವಿದೆ. ಹಾಸನ  ಜಿಲ್ಲೆ ಪ್ರಥಮ ಸ್ಥಾನ ಪಡೆಯಲು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಕೊಡುಗೆ ಇದೆ. ಹೀಗಾಗಿ ಹಾಸನ   ಜಿಲ್ಲೆ ಎಸೆಸೆಲ್ಸಿ ಫಲಿತಾಂಶದಲ್ಲಿ  ಮೊದಲನೇ ಸ್ಥಾನ ಪಡೆದಿದೆ, ಎರಡನೇ ಸ್ಥಾನ ರಾಮನಗರಕ್ಕೆ ಸಿಕ್ಕಿದೆ ಎಂದರು.

ಎಸೆಸೆಲ್ಸಿ ಫಲಿತಾಂಶದಲ್ಲಿ ಉತ್ತಮ ಸ್ಥಿತಿಗೆ ಸರಕಾರದ ನೀತಿಗಳು ಕಾರಣವಾಗಿದೆ. ಹಾಗೆಯೇ ತನ್ನ ಪತ್ನಿ ಜಿಲ್ಲಾ ಪಂಚಾಯತ್ ಶಿಕ್ಷಣಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ಪ್ರಯತ್ನ ಕೂಡ ಸಫಲವಾಗಿದೆ. ಇದರಲ್ಲಿ ಮಾಜಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕೊಡುಗೆ ಏನು ಇಲ್ಲ ಎಂದು ಹೇಳಿದ್ದಾರೆ.

ಶಾಲೆಗಳ ಮುಖ್ಯೋಪಾಧ್ಯಾಯರು ಮತ್ತು ಅಧ್ಯಾಪಕರ ಪ್ರಯತ್ನ ಕೂಡಾ ಇದೆ. 100 ಫಲಿತಾಂಶ ಬಂದ ಎಲ್ಲಾ ಶಾಲೆಗಳ ಶಿಕ್ಷಕರಿಗೆ ಸನ್ಮಾನ ಮಾಡುತ್ತೇವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News