ಹಾಸನ: ಸಿಐಟಿಯು ನೇತೃತ್ವದಲ್ಲಿ ಅಂತರ್ರಾಷ್ಟ್ರೀಯ ಕಾರ್ಮಿಕ ದಿನಾಚರಣೆ

Update: 2019-05-01 14:31 GMT

ಹಾಸನ: ಅಂತರ್ರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಅಂಗವಾಗಿ ಮೇ 1ರಂದು ಬುಧವಾರ ಸಿಐಟಿಯು ನೇತೃತ್ವದಲಿ ಕಾರ್ಮಿಕರು ಬೃಹತ್ ಮೆರವಣಿಗೆ ನಡೆಸುವುದರ ಮೂಲಕ ‘ಮೇ ದಿನಾಚರಣೆ’ಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರ ಮೆರವಣಿಗೆ ಕಸ್ತೂರಬಾ ರಸ್ತೆ, ಎನ್.ಆರ್. ವೃತ್ತ ಹಾಗೂ ಬಿ.ಎಂ. ರಸ್ತೆ ಮೂಲಕ ತೆರಳಿದ ಅವರು,
ಸಿಐಟಿಯು ರಾಜ್ಯಾಧ್ಯಕ್ಷರಾದ ಎಸ್. ವರಲಕ್ಷ್ಮಿಯವರು ಇದೆ ವೇಳೆ ಉದ್ದೇಶಿಸಿ ಮಾತನಾಡಿದ ಅವರು,“ಯಾರು ಸಂಪತ್ತನ್ನು ಸೃಷ್ಟಿಸುತ್ತಾರೋ ಅವರಿಗೇ ಅದು ಸೇರಬೇಕು” ಎಂಬ ಘೋಷಣೆಯೊಂದಿಗೆ ಈ ವರ್ಷದ ಮೇ ದಿನಾಚರಣೆಯನ್ನು ಆಚರಿಸಬೇಕೆಂದರು.

ಲಾಭಕೋರ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಸಿಐಟಿಯು ತನ್ನ ಆಕ್ರೋಶವನ್ನು ವ್ಯಕ್ತಪಡಿಸುತದೆ. ಈ ರೀತಿಯಾಗಿ ಸಂಪತ್ತು ಕೆಲವರ ಬಳಿಯೇ ಸೇರಿಕೊಂಡಿರುವಾಗ, ಮಿಲಿಯಾಂತರ ಜನರು ನಿರುದ್ಯೋಗ, ಬಡತನ, ಅನಕ್ಷರತೆ, ಅನಾರೋಗ್ಯ, ನಿರ್ವಸತಿ, ಮೂಲ ಸೌಲಭ್ಯಗಳ ಕೊರತೆಯಿಂದ ನರಳುತ್ತಿರುವುದು ಮಾನವ ಕುಲವೇ ನಾಚಿಕೆ ಪಡುವ ವಿಷಯವಾಗಿದೆ; ಆದ್ದರಿಂದಾಗಿ, ಇಂತಹ ಅಮಾನವೀಯ ಬಂಡವಾಳಶಾಹಿ ವ್ಯವಸ್ಥೆಯು ಮುಂದುವರಿಯುವ ಹಕ್ಕಿಲ್ಲ. ಇದನ್ನು ಮುಂದುವರಿಯಲು ಬಿಡಬಾರದು ಎನ್ನುವುದು ಸಿಐಟಿಯು ನಿಲುವಾಗಿದೆ. ಹಾಗೂ ಬಂಡವಾಳಶಾಹಿ ವ್ಯವಸ್ಥೆಯನ್ನು ಕಿತ್ತುಹಾಕುವಲ್ಲಿ ಕಾರ್ಮಿಕ ವರ್ಗದ ಪಾತ್ರದ ಕುರಿತು ಕಾರ್ಮಿಕರ ಪ್ರಜ್ಞೆಯನ್ನು ಎತ್ತರಿಸಲು ಮತ್ತು ಎಲ್ಲಾ ಶೋಷಣೆಯನ್ನು ಕೊನೆಗಾಣಿಸುವ ಅಂತಿಮ ಸಂಘರ್ಷಕ್ಕಾಗಿ ಕಾರ್ಮಿಕ ವರ್ಗವನ್ನು ಸಜ್ಜುಗೊಳಿಸಲು ಸಿಐಟಿಯು ಪ್ರತಿಜ್ಞೆ ಮಾಡುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಫೃಥ್ವಿ, ಅರವಿಂದ್ ನವೀನ್ ಕುಮಾರ್ ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News