ಗ್ರಂಥಾಲಯ ಮೇಲ್ವಿಚಾರಕ ಆತ್ಮಹತ್ಯೆಗೆ ಶರಣು
Update: 2019-05-03 23:40 IST
ಶಿವಮೊಗ್ಗ, ಮೇ 3: ಗ್ರಂಥಾಲಯ ಮೇಲ್ವಿಚಾರಕರೊಬ್ಬರು ತಮ್ಮ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹಾರೇಗೊಪ್ಪ ಗ್ರಾಮದಲ್ಲಿ ನಡೆದಿದೆ.
ಚಂದ್ರನಾಯ್ಕ್ (33) ಆತ್ಮಹತ್ಯೆಗೆ ಶರಣಾದ ಮೇಲ್ವಿಚಾರಕ ಎಂದು ಗುರುತಿಸಲಾಗಿದೆ. ಇವರು ಹಾರೇಗೊಪ್ಪ ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮನೆಯಲ್ಲಿನ ಆರ್ಥಿಕ ಸಂಕಷ್ಟ, ಪೋಷಕರ ಅನಾರೋಗ್ಯ ಮತ್ತಿತರ ಕಾರಣಗಳಿಂದ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.