ಓ ಮೆಣಸೇ…

Update: 2019-05-05 18:35 GMT

ನನ್ನನ್ನು ಬಿಟ್ಟು ಎಲ್ಲರಿಗೂ ಸಿಎಂ ಆಗುವ ಅರ್ಹತೆ ಇದೆ - ಯು.ಟಿ. ಖಾದರ್, ಸಚಿವ

ಅನರ್ಹತೆಯೇ ಸಿಎಂ ಆಗಲು ಇರುವ ಅರ್ಹತೆ ಎನ್ನುವ ಗುಟ್ಟು ಗೊತ್ತಾಗಿರಬೇಕು.

---------------------

ಮಮತಾ, ಮಾಯಾವತಿ ಮತ್ತು ಚಂದ್ರಬಾಬು ನಾಯ್ಡು ಪ್ರಧಾನಿ ಹುದ್ದೆಗೆ ಉತ್ತಮ ಆಯ್ಕೆ - ಶರದ್ ಪವಾರ್, ಎನ್‌ಸಿಪಿ ಅಧ್ಯಕ್ಷ
  ನೀವೊಬ್ಬರೇ ಆಯ್ಕೆ ಮಾಡಿದರೆ ಸಾಕಾಗುವುದಿಲ್ಲವಲ್ಲ?
---------------------

ನಮ್ಮದು ಹಿಟ್ಲರ್ ಆಡಳಿತವಲ್ಲ - ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ
ತಮ್ಮ ತಂದೆ ಗುಂಡೂರಾವ್ ಕಾಲದ ಆಡಳಿತ ಎನ್ನುತ್ತಿದ್ದೀರಾ?
---------------------
 

ಮೋದಿ ಯಾವತ್ತೂ ಜಾತಿ ರಾಜಕಾರಣ ಮಾಡಿಲ್ಲ - ಅರುಣ್ ಜೇಟ್ಲಿ, ಕೇಂದ್ರ ಸಚಿವ
ಅವರದೇನಿದ್ದರೂ ಅಂಬಾನಿ ರಾಜಕಾರಣ.

---------------------
  
ರಾಷ್ಟ್ರೀಯತೆಯನ್ನು ಮಾಧ್ಯಮಗಳ ಮೂಲಕ ಬಿಜೆಪಿ ಮಾರಾಟ ಮಾಡುತ್ತಿದೆ - ಪಿ. ಚಿದಂಬರಂ, ಕಾಂಗ್ರೆಸ್ ನಾಯಕ
ಮಾರಾಟಕ್ಕಿರುವ ಮಾಧ್ಯಮಗಳ ಮೂಲಕ ಮಾರಾಟ.

---------------------

ಭಾರತದಲ್ಲಿ ಚುನಾವಣೆ ಬಳಿಕ ಉಭಯ ರಾಷ್ಟ್ರಗಳ ಸಂಬಂಧದಲ್ಲಿ ಸುಧಾರಣೆ ಕಂಡು ಬರಲಿದೆ - ಇಮ್ರಾನ್ ಖಾನ್, ಪಾಕ್ ಪ್ರಧಾನಿ

ಅಂದರೆ ಚುನಾವಣೆ ಮುಗಿಯುವವರೆಗೆ ಸಂಬಂಧ ಸುಧಾರಣೆ ಬೇಡ ಎಂದು ಉಭಯ ದೇಶಗಳ ನಡುವೆ ಒಪ್ಪಂದವಾಗಿದೆಯೇ?

---------------------

ವಿಭಜಕ ಶಕ್ತಿಗೆ ಬೆಂಬಲ ನೀಡುವುದು ದೇಶದ್ರೋಹ - ಅಮಿತ್ ಶಾ, ಬಿಜೆಪಿ ಅಧ್ಯಕ್ಷ

ನಿಮ್ಮನ್ನು ಅಧಿಕಾರಕ್ಕೇರಿಸಿದಾಗಲೇ ಜನರಿಗೆ ಅದು ಅರ್ಥವಾಗಿದೆ.

---------------------
ನಾನು ಇನ್ನು ಮುಂದೆ ಪತ್ರಕರ್ತರೊಂದಿಗೆ ಮಾತನಾಡುವುದಿಲ್ಲ - ಕುಮಾರಸ್ವಾಮಿ, ಮುಖ್ಯಮಂತ್ರಿ
ವೌನಕ್ಕೂ ಸಾವಿರ ಅರ್ಥಗಳನ್ನು ಹುಡುಕಿ ಬರೆಯುತ್ತಾರೆ ಪತ್ರಕರ್ತರು.

---------------------

ನನಗೆ ಸಮೀಕ್ಷೆಗಳಲ್ಲಿ ನಂಬಿಕೆ ಇಲ್ಲ - ಸುಮಲತಾ ಅಂಬರೀಷ್, ಮಂಡ್ಯ ಲೋಕಸಭೆ ಕ್ಷೇತ್ರದ ಪ. ಅಭ್ಯರ್ಥಿ

ರಾಜಕೀಯದಲ್ಲಿ ಯಾವುದನ್ನೂ ನಂಬಬಾರದು. ನಿರಾಸೆ ಖಚಿತ.

---------------------

ಮೀಸಲಾತಿ ತೆಗೆದು ಹಾಕುವ ಶಕ್ತಿ ಈ ಭೂಮಿಯ ಮೇಲೆ ಯಾರಿಗೂ ಇಲ್ಲ - ನಿತೀಶ್ ಕುಮಾರ್, ಬಿಹಾರ ಸಿಎಂ
ಅದಕ್ಕಾಗಿಯೇ ಮೋದಿಯವರು ತಮ್ಮನ್ನು ಬಳಸಿಕೊಳ್ಳುತ್ತಿರುವುದು.

---------------------

ಸಂವಿಧಾನದಲ್ಲಿ ಪರಂಪರೆ ಇಲ್ಲ - ಎಸ್.ಎಲ್. ಭೈರಪ್ಪ, ಸಾಹಿತಿ
ಆದುದರಿಂದಲೇ ಅದು ಸರ್ವರಿಗೂ ನ್ಯಾಯ ಕೊಟ್ಟಿರುವುದು.

---------------------
 ದೇಶದ ಸಂವಿಧಾನವನ್ನು ಗೌರವಿಸಿ - ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
ಭೈರಪ್ಪರಿಗೆ ಕರೆಯೇ?
---------------------

ಕಳ್ಳ ವೋಟು ಹಾಕಿಸಿಕೊಂಡು ನಾನು ಶಾಸಕನಾಗಿಲ್ಲ - ಪ್ರೀತಂ ಗೌಡ, ಶಾಸಕ
ಹಾಗಾದರೆ ಕಳ್ಳ ನೋಟು ಕೆಲಸ ಮಾಡಿರಬೇಕು.

---------------------

ಸಚಿವ ಸತೀಶ್ ಜಾರಕಿಹೊಳಿ ಸಾಹುಕಾರ, ನಾನು ಪ್ರಜೆ - ಡಿ.ಕೆ. ಶಿವಕುಮಾರ್, ಸಚಿವ

ಚುನಾವಣೆಯ ಹೊತ್ತಿನಲ್ಲಿ ಈ ಪ್ರಜೆಯೇ ಸಾಹುಕಾರ ಎಂಬ ನಂಬಿಕೆಯ ಮೇಲೆ ಹೇಳಿಕೆ.

--------------------
 ಬಿಜೆಪಿಗೆ ವೋಟು ಹಾಕಿದ್ದರಿಂದ ಎಸೆಸೆಲ್ಸಿಯಲ್ಲಿ ಕರಾವಳಿಗೆ ಹಿನ್ನೆಡೆಯಾಗಿದೆ - ಎಚ್.ಡಿ. ರೇವಣ್ಣ, ಸಚಿವ

ಫಲಿತಾಂಶಕ್ಕೆ ಮೊದಲೇ ನಿಮಗೆ ಗೊತ್ತಾದದ್ದು ಹೇಗೆ?

 ---------------------

ಕಾಂಗ್ರೆಸಿಗರು ನನ್ನನ್ನು ಕೊಲ್ಲುವ ಕನಸು ಕಾಣುತ್ತಿದ್ದಾರೆ - ನರೇಂದ್ರ ಮೋದಿ, ಪ್ರಧಾನಿ
ಅದಾನಿ, ಆಂಬಾನಿಯಿಂದ ತಮ್ಮನ್ನು ಕೊಳ್ಳುವ ಕೆಲಸ ಯಾವತ್ತೋ ಆಗಿದೆ.

---------------------

ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರೂ ನನಗೇ ಮತ ಹಾಕಿದ್ದಾರೆ - ಪ್ರತಾಪ ಸಿಂಹ, ಸಂಸದ

ಆದರೆ ಬಿಜೆಪಿ ಕಾರ್ಯಕರ್ತರು ಹಾಕಿರುವುದರ ಕುರಿತಂತೆ ಅನುಮಾನ ಇದೆ.

---------------------

  ಮೋದಿ ಇದ್ದರೆ ಎಲ್ಲವೂ ಸಾಧ್ಯ - ಅರುಣ್ ಜೇಟ್ಲಿ, ಕೇಂದ್ರ ಸಚಿವ

ಅಂದರೆ ಮೋಸ, ವಂಚನೆ ಎಲ್ಲವೂ.

---------------------

ದಾರಿ ತಪ್ಪಿದ ಮಕ್ಕಳನ್ನು ತಿದ್ದಬಹುದು. ಆದರೆ ದಾರಿತಪ್ಪಿಸಲೆಂದೇ ಹುಟ್ಟಿದ ಮಕ್ಕಳನ್ನು ತಿದ್ದಲಾಗದು - ಜಗ್ಗೇಶ್, ನಟ
 ತಮ್ಮನ್ನು ಬಿಜೆಪಿ ತಿದ್ದುವಲ್ಲಿ ವಿಫಲವಾದ ಕಾರಣ ತಿಳಿಯಿತು.

---------------------
ಕತ್ತಲಲ್ಲಿ ಕುಳಿತು ಕಲ್ಲು ಎಸೆಯುವ ವ್ಯಕ್ತಿ ನಾನಲ್ಲ - ರಮೇಶ್ ಜಾರಕಿಹೊಳಿ, ಶಾಸಕ
  ಅಂದರೆ ಹಗಲಲ್ಲೇ ಕಲ್ಲೆಸೆಯುವೆ ಎಂಬ ಬೆದರಿಕೆಯೇ?
---------------------

ಮುಸ್ಲಿಮರು ನನಗೆ ಮತ ನೀಡದಿದ್ದರೂ ಅವರ ಕೆಲಸ ಮಾಡಿಕೊಡುತ್ತಿದ್ದೇನೆ - ವರುಣ್‌ಗಾಂಧಿ, ಸಂಸದ
  ಮಗನಿಂದ ಕೆಲವೊಮ್ಮೆ ತಾಯಂದಿರು ಕಲಿಯಲಿಕ್ಕಿದೆ ಎನ್ನುವುದನ್ನು ಮೇನಕಾ ಗಾಂಧಿ ಅರ್ಥ ಮಾಡಿಕೊಂಡಾರೇ.
---------------------
ಕೇರಳಕ್ಕೆ ಧರ್ಮ ರಾಜಕಾರಣದ ಅಗತ್ಯವಿದೆ - ನಳಿನ್‌ಕುಮಾರ್ ಕಟೀಲು, ಸಂಸದ
  ಮಂಗಳೂರಿಗೆ ತುರ್ತಾಗಿ ಪಂಪ್‌ವೆಲ್ ಬ್ರಿಡ್ಜ್‌ನ ಅಗತ್ಯವಿದೆ.
---------------------

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...