ಎಸ್ಸೆಸ್ಸೆಫ್ ಕೆ.ಸಿ ನಗರ ವತಿಯಿಂದ ರಂಝಾನ್ ಕಿಟ್ ವಿತರಣೆ

Update: 2019-05-06 12:51 GMT

ಕೆ.ಸಿ ರೋಡ್, ಮೇ 6: ಎಸ್ಸೆಸ್ಸೆಫ್ ಕೆ.ಸಿ ನಗರ ಶಾಖಾ ವತಿಯಿಂದ ರಂಝಾನ್ ಕಿಟ್ ವಿತರಣೆ, 'ಮರ್ಹಬಾ ಯಾ ಶಹ್ರ ರಮಳಾನ್' ಹಾಗೂ ಅಭಿನಂದನಾ ಕಾರ್ಯಕ್ರಮವು ಶಾಖಾ ಕಚೇರಿ ವಠಾರದಲ್ಲಿ ಅಧ್ಯಕ್ಷ ನಝೀರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸ್ಥಳೀಯ ಖತೀಬ್ ಹನೀಫ್ ಸಖಾಫಿ, ಶಾಖೆಯು ನಡೆಸುತ್ತಿರುವ ಕಿಟ್ ವಿತರಣೆ ಹಾಗೂ ಇತರ ಸಾಮಾಜಿಕ ಕಾರ್ಯಕ್ರಮವನ್ನು ವಿವರಿಸಿದರು. ನಂತರ ಮಾತನಾಡಿದ ಮುಸ್ತಫಾ ಝುಹ್ರಿ, ರಂಝಾನ್ ಕುರ್ಆನ್ ಆವತರಿಸಿದ ತಿಂಗಳಾಗಿದೆ. ಕುರ್ಆನ್ ಪಠಣ ಹಾಗೂ ಇತರ ಒಳಿತನ್ನು ಅಧಿಕಗೊಳಿಸಿ ರಂಝಾನ್ ಪದದ ಅರ್ಥವೇ ಸೂಚಿಸುವಂತೆ ಪಾಪಗಳನ್ನು ಅಳಿಸಿ ಪರಿಶುದ್ಧರಾಗಬೇಕು ಎಂದು ಹೇಳಿದರು.

ನಂತರ ನಡೆದ ಅಭಿನಂದನಾ ಕಾರ್ಯದಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದ ಶಾಖಾ ಕಾರ್ಯದರ್ಶಿ ರಿಝ್ವಾನ್ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ವಿಶಿಷ್ಟ ಶ್ರೇಣಿ ಪಡೆದ ರಿಫಾಝ್ ಮತ್ತು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದ ಮುಶರ್ರಫ್ ಅವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ಉಪಾಧ್ಯಕ್ಷ ಇಸ್ಮಾಯಿಲ್, ಸ್ಥಳೀಯ ಮಸೀದಿ ಕೋಶಾಧಿಕಾರಿ ಅಬ್ಬಾಸ್ ಯು.ಸಿ, ಹಸನಬ್ಬ ಹಾಜಿ ಉಪಸ್ಥಿತರಿದ್ದರು. ಶಾಖಾ ಕೋಶಾಧಿಕಾರಿ ಮುಸ್ತಫ ಸ್ವಾಗತಿಸಿ, ವಂದಿಸಿದರು. ಉಳ್ಳಾಲ ಡಿವಿಶನ್ ಬ್ಲಡ್ ಸೈಬೋ ಚೇರ್ಮನ್ ಹಕೀಂ ಪೂಮನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News