ಬಸವ ಜಯಂತಿಗೆ ಶುಭಾಶಯ ಕೋರಿದ ಮುಖ್ಯಮಂತ್ರಿ
Update: 2019-05-06 22:52 IST
ಬೆಂಗಳೂರು, ಮೇ 06: ಸಾಮಾಜಿಕ ಕ್ರಾಂತಿಯ ಹರಿಕಾರ ಜಗಜ್ಯೋತಿ ಬಸವೇಶ್ವರ ಜಯಂತಿಯ ಸಂದರ್ಭದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಶುಭಾಶಯ ಕೋರಿದ್ದಾರೆ.
'ಕಾಯಕವೇ ಕೈಲಾಸ' ಎಂಬ ಮಂತ್ರ ನೀಡಿದ ಶತಮಾನಗಳ ಹಿಂದೆಯೇ ಸಮಾಜವಾದವನ್ನು ಜಾರಿಗೆ ತಂದ ಬಸವಣ್ಣ, ಮನುಕುಲಕ್ಕೆ ಕರ್ನಾಟಕದ ಹೆಮ್ಮೆಯ ಕೊಡುಗೆ. ಕಳ ಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ, ಅನ್ಯರಿಗೆ ಅಸಹ್ಯ ಪಡಬೇಡ" ಎಂದು ಜೀವನ ರಹಸ್ಯವನ್ನು ಅತಿ ಸರಳವಾಗಿ ಹೇಳಿದ ಬಸವಣ್ಣ ನವರು ರೂಪಿಸಿದ "ಸರ್ವ ಜನಾಂಗದ ಶಾಂತಿಯ' ಆದರ್ಶ ನಮ್ಮದೂ ಆಗಲಿ. ಅಪರೂಪದ ದಿವ್ಯ ಚೇತನ ರೂಪಿಸಿಕೊಟ್ಟ ದಾರಿಯಲ್ಲಿ ಸಾಗುವ ಸಂಕಲ್ಪ ನಮ್ಮದಾಗಲಿ ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.