ಸಿಬಿಎಸ್‍ಇ: ಮೂಡಿಗೆರೆ ಎಂಇಎಸ್ ಶಾಲೆಗೆ ಶೇ.100 ಫಲಿತಾಂಶ

Update: 2019-05-06 17:31 GMT

ಮೂಡಿಗೆರೆ, ಮೇ 6: ಪ್ರಸಕ್ತ ಸಾಲಿನ ಸಿಬಿಎಸ್‍ಇ ಫಲಿತಾಂಶದಲ್ಲಿ ಪಟ್ಟಣದ ಎಂಇಎಸ್ ಶಾಲೆ ಶೇ.100 ಫಲಿತಾಂಶ ಪಡೆದಿದೆ. ಒಟ್ಟು 45 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 10 ಅತ್ಯುನ್ನತ ಶ್ರೇಣಿ, ಶೇ.80 ರಿಂದ ಶೇ.85ರವರೆಗೆ 4 ವಿದ್ಯಾರ್ಥಿಗಳು, ಶೇ.70 ರಿಂದ ಶೇ.79ವರೆಗೆ 11 ವಿದ್ಯಾರ್ಥಿಗಳು, ಶೇ.60 ರಿಂದ ಶೇ.69ರವರೆಗೆ 14 ವಿದ್ಯಾರ್ಥಿಗಳು, ಶೇ.50 ರಿಂದ 59ರವರೆಗೆ 6 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಅಪೂರ್ವ ಎಸ್. ಶೇ.93, ಶ್ರೀಜಿತ್ ಐತಾಲ್ ಶೇ.92, ರಿಷಿರಾಮ್ ಶೇ.92, ಯಶಸ್ ಶೇ.89, ಶ್ರೇಯ ಶೇ.88, ಆಯುಷ್ ಎಂ.ಆರ್. ಶೇ.88, ಹಸ್ತಾನ್ ಶೇ.87, ಸುಜಲ್ ಶೇ.86, ಆರಸ್ ಗೌಡ ಶೇ.86 ರಷ್ಟು ಅಂಕಗಳಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News