×
Ad

ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ ಮನೆ ಕೆಲಸದಾಕೆ ಬಂಧನ

Update: 2019-05-07 23:13 IST

ಮೈಸೂರು,ಮೇ.7: ತಾನು ಕೆಲಸ ಮಾಡುತ್ತಿದ್ದ ಮನೆಯಿಂದಲೇ ಮಹಿಳೆಯೋರ್ವಳು ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣಗಳನ್ನು ಕಳುವು ಮಾಡಿದ ಘಟನೆ ಜಯಲಕ್ಷ್ಮಿಪುರಂನಲ್ಲಿ ನಡೆದಿದ್ದು, ಮನೆ ಕೆಲಸದಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತಳನ್ನು ಮಂಜುನಾಥಪುರದ ನಿವಾಸಿ ಮಂಗಳಮ್ಮ(45)ಎಂದು ಗುರುತಿಸಲಾಗಿದೆ. ಈಕೆ ಜಯಲಕ್ಷ್ಮಿಪುರಂನ ಎರಡನೇ ಬ್ಲಾಕ್ ನಲ್ಲಿ ವಾಸವಿದ್ದ ಎಂ.ಎಸ್.ರೇವತಿ ಎಂಬವರ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದಳು. ರೇವತಿಯವರು ಬೀರುವಿನಲ್ಲಿಟ್ಟಿದ್ದ 2.49 ಲಕ್ಷ ಮೌಲ್ಯದ ಚಿನ್ನ ಹಾಗೂ 7,650 ರೂ.ಮೌಲ್ಯದ ಬೆಳ್ಳಿ ಆಭರಣಗಳನ್ನು ಕಳುವು ಮಾಡಿದ್ದಳು. ಈಕೆ ಕೆಲಸ ಬಿಟ್ಟ ಬಳಿಕ ಮನೆಯಲ್ಲಿ ಕಳ್ಳತನ ನಡೆದಿರುವುದು ಗೊತ್ತಾಗಿದೆ. ರೇವತಿ ಅವರು ಆಗ ಪೊಲೀಸರಿಗೆ ದೂರು ನೀಡಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಈಕೆ ವಿವಿಧ ಪಾನ್ ಬ್ರೋಕರ್ಸ್ ಅಂಗಡಿಗಳಲ್ಲಿ ಗಿರವಿ ಇಟ್ಟಿದ್ದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಎನ್.ಆರ್.ವಿಭಾಗದ ಎಸಿಪಿ ಧರಣೇಶ್ ಮಾರ್ಗದರ್ಶನದಲ್ಲಿ ಇನ್ಸ್ ಪೆಕ್ಟರ್ ಎಸ್.ಡಿ.ಸುರೇಶ್ ಕುಮಾರ್, ಎಎಸ್ ಐ ಜಯರಾಮು, ಸಿಬ್ಬಂದಿಗಳಾದ ಉಮೇಶ್, ಬಿ.ಮಂಜುನಾಥ್, ಯಶೋಧಾ, ಶಿವಮಲ್ಲು, ರಮೇಶ್, ಮಂಜುನಾಥ್, ಟಿ.ಎಂ.ಪ್ರಶಾಂತ್, ಅಪೂರ್ವ ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News