ಹನೂರು: ಧಾರಾಕಾರ ಮಳೆಗೆ ಬಾಳೆ ಫಸಲು ನಾಶ

Update: 2019-05-08 17:12 GMT

ಹನೂರು, ಮೇ 8: ತಾಲೂಕಿನ ಹೂಗ್ಯಂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುರಿದ ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಹಲವು ಜಮೀನುಗಳಲ್ಲಿ ಬೆಳೆದಿದ್ದ ಬಾಳೆ ಫಸಲು ನೆಲಕ್ಕುರುಳಿದೆ.

ಹೂಗ್ಯಂ ಗ್ರಾಪಂ ವ್ಯಾಪ್ತಿಯ ವಿವಿಧೆಡೆ ಮಂಗಳವಾರ ಸಂಜೆ ಸತತ 3 ಗಂಟೆಗೂ ಅಧಿಕ ಗಾಳಿ ಸಹಿತ ಧಾರಕಾರದ ಮಳೆಯಾಗಿದ್ದು, ಮಳೆಗೆ ಸಿಲುಕಿ ಈ ಭಾಗದ ಅನೇಕ ರೈತರು ಬೆಳೆದಿದ್ದ ಭಾಳೆ ಫಸಲು ಸಂಪೂರ್ಣ ನಾಶವಾಗಿದೆ. ಇನ್ನು ಕೆಲವೇ ತಿಂಗಳು ಬಾಳೆ ಫಸಲಿನ ಕಟಾವಿಗಾಗಿ ಕಾದು ಕುಳಿತಿದ್ದ ರೈತರ ಆಸೆಗೆ ಬಿರುಗಾಳಿ ಮಳೆ ತಣ್ಣೀರೆರಚಿದೆ.

ಸಂಬಂಧ ಪಟ್ಟ ಅಧಿಕಾರಿಗಳು ಶೀಘ್ರವಾಗಿ ಪ್ರಕೃತಿ ವಿಕೋಪದಡಿ ಪರಿಹಾರವನ್ನು ಒದಗಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News