ಮೇ 29: ತುಮಕೂರು ಜಿಲ್ಲೆಯ 14 ಗ್ರಾ.ಪಂ.ನ ವಿವಿಧ ಸ್ಥಾನಗಳಿಗೆ ಚುನಾವಣೆ

Update: 2019-05-09 12:04 GMT

ತುಮಕೂರು, ಮೇ 9: ಜಿಲ್ಲೆಯ ಗುಬ್ಬಿ ತಾಲೂಕಿನ 6, ತುರುವೇಕೆರೆಯ 3 ಹಾಗೂ ಕುಣಿಗಲ್, ಚಿಕ್ಕನಾಯಕನಹಳ್ಳಿ, ಶಿರಾ, ಮಧುಗಿರಿ, ಪಾವಗಡ ತಾಲೂಕಿನ ತಲಾ 1 ಗ್ರಾಮ ಪಂಚಾಯತ್ ಸೇರಿ ಒಟ್ಟು 14 ಗ್ರಾ.ಪಂ ನ ವಿವಿಧ ಕ್ಷೇತ್ರಗಳ ಸದಸ್ಯ ಸ್ಥಾನಗಳಿಗೆ ಮೇ 29ರಂದು ಚುನಾವಣೆ ನಡೆಯಲಿದೆ.

ಗ್ರಾಮ ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ಮೇ 13ರಂದು ನೊಟೀಸ್ ಹೊರಡಿಸಲಾಗುವುದು. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸಲು ಮೇ 16 ಕೊನೆಯ ದಿನವಾಗಿದ್ದು, ಮೇ 17ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಮೇ 20 ಕೊನೆಯ ದಿನವಾಗಿದ್ದು, ಮೇ 29ರಂದು ಮತದಾನದ ನಡೆಯಲಿದೆ. ಚುನಾವಣೆ ನಡೆಯಲಿರುವ ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯಲ್ಲಿ ಮೇ 13 ರಿಂದ 31ರ ವರೆಗೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. 

ಚುನಾವಣೆ ನಡೆಯಲಿರುವ ಗ್ರಾಮ ಪಂಚಾಯತ್ ಗಳ ವಿವರ: ಗುಬ್ಬಿ ತಾಲೂಕು ಹೊಸಕೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಗನಹಳ್ಳಿ, ತ್ಯಾಗಟೂರು ಗ್ರಾಮ ಪಂಚಾಯತ್ ನ ತ್ಯಾಗಟೂರು, ಜಿ. ಹೊಸಹಳ್ಳಿಯ ಗ್ರಾ.ಪಂ. ಬ್ಯಾಡಗೆರೆ, ಹಿಂಡಸಗೆರೆ ಗ್ರಾ.ಪಂ. ಪಡುಗುಡಿ, ಸಿ.ಎಸ್.ಪುರ ಗ್ರಾಮ ಪಂಚಾಯತ್ ನ ಹುರುಳಗೆರೆ, ಬ್ಯಾಡಗೆರೆ ಗ್ರಾ.ಪಂ ನ ದಾಸರಕಲ್ಲಹಳ್ಳಿ ಕ್ಷೇತ್ರ, ಕುಣಿಗಲ್ ತಾಲೂಕು ತರೇದಕುಪ್ಪೆ ಗ್ರಾ.ಪಂ. ನ ಚಿಕ್ಕಮಳಲವಾಡಿ ಕ್ಷೇತ್ರ, ಚಿಕ್ಕನಾಯಕನಹಳ್ಳಿ ತಾಲೂಕು ಬರಗೂರು ಗ್ರಾ.ಪಂ. ಹೊಸಕರೆ ಕ್ಷೇತ್ರ, ತುರುವೇಕೆರೆ ತಾಲೂಕು ಮುನಿಯೂರು ಗ್ರಾ.ಪಂ. ನ ಮುನಿಯೂರು, ಮುನಿಯೂರು ಗ್ರಾ.ಪಂ. ನ ಎಂ. ಬೇವಿನಹಳ್ಳಿ, ದಬ್ಬೇಘಟ್ಟ ಗ್ರಾ.ಪಂ ನ ಗೂರಲಮಠ ಕ್ಷೇತ್ರ, ಮಧುಗಿರಿ ತಾಲೂಕು ಸಿಂಗನಹಳ್ಳಿ ಗ್ರಾಮ ಪಂಚಾಯತ್ ನ ಅಡವಿನಾಗೇನಹಳ್ಳಿ ಕ್ಷೇತ್ರ, ಶಿರಾ ತಾಲೂಕು ತಡಕಲೂರು ಗ್ರಾ.ಪಂ. ಬೆಜ್ಜಿಹಳ್ಳಿ ಕ್ಷೇತ್ರ ಹಾಗೂ ಪಾವಗಡ ತಾಲೂಕು ಕೊಡಮಡಗು ಗ್ರಾಮ ಪಂಚಾಯತ್ ವ್ಯಾಪ್ತಿಯ ರಂಗನಾಥಪುರ(ಜಾಜೂರಾಯನಹಳ್ಳಿ ತಾಂಡಾ)ಕ್ಷೇತ್ರ ಸೇರಿ 14 ಗ್ರಾಮ ಪಂಚಾಯತ್ಗಳ ವಿವಿಧ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News