ಕೊಡಂಗಾಯಿ ಅಲ್ ಅಮೀನ್ ಯೂತ್ ಫೆಡರೇಶನ್ ವತಿಯಿಂದ ರಂಝಾನ್ ಕಿಟ್ ವಿತರಣೆ
Update: 2019-05-09 23:17 IST
ವಿಟ್ಲ: ಪ್ರತಿ ವರ್ಷದಂತೆ ರಂಝಾನ್ ತಿಂಗಳ ಪ್ರಯುಕ್ತ ಕೊಡಂಗಾಯಿ ಹಾಗೂ ಟಿಪ್ಪು ನಗರ, ಕರ್ಕಳ ಪರಿಸರದ ಆಯ್ದ 15 ಬಡ ಕುಟುಂಬಗಳಿಗೆ ಅಲ್ ಅಮೀನ್ ಯೂತ್ ಫೆಡರೇಶನ್ (ರಿ) ವತಿಯಿಂದ ರಂಝಾನ್ ಕಿಟ್ ವಿತರಿಸಲಾಯಿತು.
ಸಮಿತಿ ಅಧ್ಯಕ್ಷ ಅಬ್ದುರಝಾಕ್ ಎಂ.ಕೆ ಕಿಟ್ ವಿತರಣೆಗೆ ಚಾಲನೆ ನೀಡಿದರು. ಪ್ರದಾನ ಕಾರ್ಯದರ್ಶಿ ಉಮರ್ ಕಮ್ಮಾಡಿ, ಉಪಾಧ್ಯಕ್ಷ ಶರೀಫ್ ಮೆಳಂಗಡಿ, ರಫೀಕ್ ಆರ್.ಎಂ, ಕಾರ್ಯದರ್ಶಿ ಮಜೀದ್ ಟಿ.ಎಂ, ಸಂಚಾಲಕ ಅಝರುದ್ದೀನ್ ಆರ್.ಸಿ.ಕೆ, ಸದಸ್ಯರಾದ ಅಶ್ರಫ್ ಡಿ.ಎ, ರಫೀಕ್ ಪಿ, ಕೋಶಾಧಿಕಾರಿ ಲತೀಫ್ ಎಲ್.ಎಂ ಹಾಗೂ ಸ್ಥಳೀಯ ಯುವಕರು ಉಪಸ್ಥಿತರಿದ್ದರು.