×
Ad

ಬಸ್‍ಗಳು ಮುಖಾಮುಖಿ ಢಿಕ್ಕಿ: ಓರ್ವ ಮೃತ, 12 ಮಂದಿಗೆ ಗಾಯ

Update: 2019-05-10 21:56 IST

ಸಕಲೇಶಪುರ, ಮೇ 10: ತಾಲೂಕಿನ ಬಾಗೆ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕೆಎಸ್‍ಆರ್‍ಟಿಸಿಯ ಎರಡು ರಾಜಹಂಸ ಬಸ್‍ಗಳು ಮುಖಾಮುಖಿ ಢಿಕ್ಕಿಯಾಗಿ ಓರ್ವ ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿದ್ದಾರೆ. 

ಕುಂದಾಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕುಮಟಾದ ಪ್ರಭಾಕರ್ (52) ಮೃತಪಟ್ಟಿದ್ದು, ಗಾಯಗೊಂಡವರನ್ನು ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಕುಂದಾಪುರ-ಬೆಂಗಳೂರು ಹಾಗೂ ಬೆಂಗಳೂರು-ಸುಬ್ರಮಣ್ಯ ಮಾರ್ಗದ ಬಸ್‍ಗಳು ಪರಸ್ಪರ ಢಿಕ್ಕಿಯಾದ ಬಸ್‍ಗಳಾಗಿದ್ದು, ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News