×
Ad

ಮೈಸೂರು: ಮಹಿಳೆಯ ಅತ್ಯಾಚಾರ ಪ್ರಕರಣ ಕುವೆಂಪು ಠಾಣೆಗೆ ವರ್ಗಾವಣೆ

Update: 2019-05-10 22:10 IST

ಮೈಸೂರು,ಮೇ.10: ಮೈಸೂರಿನ ಶ್ರೀರಾಂಪುರ ರಿಂಗ್ ರಸ್ತೆಯ ನಿರ್ಜನ ಪ್ರದೇಶದಲ್ಲಿ ನಡೆದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣವನ್ನು ಜಯಪುರ ಪೊಲೀಸ್ ಠಾಣೆಯಿಂದ ಮೈಸೂರಿನ ಕುವೆಂಪು ನಗರ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಜಯಪುರ ಪೊಲೀಸ್ ಠಾಣೆಯಿಂದ ಅತ್ಯಚಾರ ಪ್ರಕರಣವನ್ನು ಕುವೆಂಪುನಗರ ಠಾಣೆಗೆ ನೀಡಲು ಎಸ್ಪಿ ಅಮಿತ್ ಸಿಂಗ್ ಚಿಂತನೆ ನಡೆಸಿದ್ದು, ಬಳಿಕ ಪ್ರಕರಣವನ್ನು ಹಸ್ತಾಂತರಿಸಿದರು ಎನ್ನಲಾಗಿದೆ. ಘಟನೆ ಬಳಿಕ ಮೈಸೂರು ನಗರ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದು, ಘಟನಾ ಸ್ಥಳದ ಮ್ಯಾಪ್ ನೋಡಿ ಇದು ನಮಗೆ ಬರಲ್ಲ ಎಂದಿದ್ದಾರೆ ಎನ್ನಲಾಗಿದೆ. ಎಸ್ಪಿ ಅಮಿತ್ ಸಿಂಗ್ ಮುತುವರ್ಜಿಯಿಂದ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಮೊದಲು ಪ್ರಕರಣ ದಾಖಲು ಮಾಡಿ, ನಂತರ ನೋಡೋಣ ಎಂದು ಎಸ್ಪಿ ಅಮಿತ್ ಸಿಂಗ್ ತಿಳಿಸಿದ್ದರು ಎನ್ನಲಾಗಿದೆ.

ಪ್ರಕರಣ ದಾಖಲು ಮಾಡಿ ಕಾರ್ಯಾಚರಣೆಗೆ ಇಳಿದಿದ್ದ ಜಿಲ್ಲಾ ಪೊಲೀಸರಿಗೆ ಮಹತ್ವ ಸುಳಿವು ದೊರಕಿದೆ ಎನ್ನಲಾಗಿದ್ದು, ಅತ್ಯಾಚಾರ ಪ್ರಕರಣದ ಸಂಬಂಧ 5ಕ್ಕೂ ಹೆಚ್ಚು ಶಂಕಿತರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. ಘಟನೆಯಿಂದ ಹಲ್ಲೆಗೊಳಗಾದ ವಿವಾಹಿತ ವ್ಯಕ್ತಿ ಮತ್ತು  ಅತ್ಯಾಚಾರಕ್ಕೆ ಒಳಗಾದ ಮಹಿಳೆಯಿಂದ ಸ್ಪಷ್ಟವಾದ ಮಾಹಿತಿ ಸಿಗುತ್ತಿಲ್ಲ ಎನ್ನಲಾಗಿದೆ. ಸುಮಾರು 8 ತಂಡಗಳಿಂದ ಪ್ರಕರಣದ ತನಿಖೆ ಚುರುಕುಗೊಂಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News