ತರೀಕೆರೆ ಸಮೀಪ ಮಾಸ್ತಿಗಲ್ಲು ಪತ್ತೆ

Update: 2019-05-11 11:52 GMT

ತರೀಕೆರೆ, ಮೇ 11: ಪಟ್ಟಣಕ್ಕೆ ಅನತಿ ದೂರದ ಹುಣಸಗಟ್ಟ ಗ್ರಾಮ ಪಂಚಾಯತ್ ಗೆ ಒಳಪಡುವ ಕೆ.ಗೊಲ್ಲರಹಳ್ಳಿ ಬೇಚಾರಕ್ ಗ್ರಾಮದ ಸರ್ವೆ ನಂ.9ರಲ್ಲಿ ಒಂದು ವೀರ ಮಾಸ್ತಿ ಗಲ್ಲು ಪತ್ತೆ ಯಾಗಿದೆ ಎಂದು ಹುಣಸಗಟ್ಟ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಗದೀಶ್ ಹೇಳಿಕೆಯಲ್ಲಿ ಹೇಳಿದ್ದಾರೆ.  

ಸುಮಾರು 2 ಅಡಿ ಅಗಲ 2.6 ಅಡಿ ಎತ್ತರದ ಈ ಕಲ್ಲಿನಲ್ಲಿ ವೀರ ಮಹಿಳೆ ಕುದುರೆ ಯನ್ನೇರಿ ಖಡ್ಗವನ್ನು ಹಿಡಿದು ಯುದ್ಧ ಮಾಡುತ್ತಿರುವುದು ಕಾಣಬಹುದು. ಕಲ್ಲಿನ ಮೇಲ್ಭಾಗದಲ್ಲಿ ಚಂದ್ರ ಆಕಾರ ಸ್ಪಷ್ಟವಾಗಿ ಕಾಣುವುದಿಲ್ಲ. ಇದರ ಸಮೀಪದಲ್ಲಿ ಪುರಾತನ ಕಾಲದ ಬಾವಿಯೊಂದು ಇದ್ದು, ಅದನ್ನು ಕಾಣಬಹುದಾಗಿದೆ. ಇದರ ಸುತ್ತ ಮುತ್ತ ಮುದ್ರೆಕಲ್ಲುಗಳಿದ್ದು, ಈ ಮಾಸ್ತಿ ಕಲ್ಲು ಬಳಪದ ಕಲ್ಲಿನಿಂದ ಕೆತ್ತಲ್ಪಟ್ಟಿವೆ.

ಇತಿಹಾಸದ ದಾಖಲೆಯಿಂದ ನೋಡುವುದಾದರೆ, ಇದು ಹೊಯ್ಸಳರ ಕಾಲಮಾನದ್ದು ಎಂದು ತಿಳಿಯುತ್ತದೆ. ಮಾಸ್ತಿ ಕಲ್ಲಿನ ಕೆಳಭಾಗದಲ್ಲಿ ಬರಹಗಳು  ಮಣ್ಣಿನಲ್ಲಿ ಮುಚ್ಚಿವೆ. ಇದರ ಹೆಚ್ಚಿನ ಅಧ್ಯಯನಕ್ಕೆ ಕೇಂದ್ರ ಪುರಾತತ್ವ ಇಲಾಖೆಯ ಅನುಮತಿ ಅಗತ್ಯವಿದ್ದು, ಈ ಸಂಬಂಧ ಸಂಶೋದಕರಾದ ಡಾ.ಹಾ.ಮ ರಾಜಶೇಖರ ಮಾನ್ಯ ತಹಶೀಲ್ದಾರ್ ರವರಿಗೆ ಇದರ ಬಗ್ಗೆ ಲಿಖಿತ ರೂಪದಲ್ಲಿ ತಿಳಿಸಿದರೂ ಈ ಬಗ್ಗೆ ತಹಶಿಲ್ದಾರ್ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜಗದೀಶ್ ಹೇಳಿಕೆಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News