×
Ad

ಮೈಸೂರು: ಮೂವರು ಸರಗಳ್ಳರ ಬಂಧನ; ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶ

Update: 2019-05-11 21:35 IST

ಮೈಸೂರು,ಮೇ.11: ಮೈಸೂರು ಪೊಲೀಸರ ಆಪರೇಷನ್ ಫಾಸ್ಟ್ ಟ್ರಾಕ್ ಗೆ ಸರಗಳ್ಳರು ಬಿದ್ದಿದ್ದಾರೆ. ಮೂವರು ಖದೀಮರನ್ನು ಬಂಧಿಸಲಾಗಿದ್ದು, ಒಂದು ಬೈಕ್ ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು ಮುಹಮದ್ ಸಮೀವುಲ್ಲಾ(25), ಮಹಮದ್ ಇದ್ರೀಸ್(20), ಮಹಮದ್ ಖಾಸಿಫ್ (21) ಎಂದು ಗುರುತಿಸಲಾಗಿದೆ.  ಬಂಧಿತ ಆರೋಪಿಗಳೆಲ್ಲರೂ ಮೈಸೂರಿನವರಾಗಿದ್ದಾರೆ. ಬಂಧಿತರಿಂದ ಒಟ್ಟು 2 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಕದ್ದ ಮಾಲನ್ನು ಮಾರುವ ವೇಳೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ಸರಗಳ್ಳರ ಬಂಧನ ಹಿನ್ನೆಲೆಯಲ್ಲಿ 2018, ಅಕ್ಟೋಬರ್ ನಲ್ಲಿ ಹೆಬ್ಬಾಳದಲ್ಲಿ 30 ಗ್ರಾಂ ತೂಕದ ಚಿನ್ನದ ಸರ ಕಳ್ಳತನ ಪ್ರಕರಣ, ನಜರ್ ಬಾದ್ ಠಾಣೆಯಲ್ಲಿ 2 ಸರಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ಸರಗಳ್ಳರನ್ನು ಬಂಧಿಸಿರುವ ಸಿಬ್ಬಂದಿಗಳನ್ನು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಪ್ರಶಂಸಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News