ಸಿದ್ದಾಪುರ: ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಸಾವು
Update: 2019-05-11 23:12 IST
ಸಿದ್ದಾಪುರ, ಮೇ 11: ಈಜಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸಿದ್ದಾಪುರ ತಾಲೂಕಿನ ಹಂಚಳ್ಳಿ ಗ್ರಾಮದ ಅಘನಾಶಿನಿ ನದಿಯಲ್ಲಿ ಶನಿವಾರ ಸಂಭವಿಸಿದೆ.
ಸಿದ್ದಾಪುರದ ಚಂದನ್ ದಿನೇಶ್ ಹೆಗಡೆ (14) ಹಾಗೂ ವೆಂಕಟೇಶ್ ಗಜಾನನ ಹೆಗಡೆ (19) ನೀರುಪಾಲಾದ ಯುವಕರು ಎಂದು ಗುರುತಿಸಲಾಗಿದೆ.
ರಜೆಯ ಕಾರಣ ನಾಲ್ವರು ಸ್ನೇಹಿತರು ಅಘನಾಶಿನಿ ನದಿಗೆ ಈಜಲು ತೆರಳಿದ್ದರು. ಇಬ್ಬರು ದಡದ ಮೇಲೆ ಕುಳಿತಿದ್ದರು. ಇನ್ನಿಬ್ಬರಿಗೆ ನದಿಯ ಆಳದ ಅರಿವಿರಲಿಲ್ಲ. ಹೀಗಾಗಿ ಇವರಿಬ್ಬರು ಈಜಲು ತೆರಳಿದಾಗ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣ ದಾಖಲಿಸಿಕೊಂಡ ಸಿದ್ದಾಪುರ ಠಾಣೆ ಪೊಲೀಸರು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಮುಂದಿನ ಕ್ರಮವಹಿಸಿದ್ದಾರೆ.