ಐಪಿಎಲ್ ಬೆಟ್ಟಿಂಗ್ ನಿಂದ ಹೆಚ್ಚಾದ ಸಾಲ: ಯುವಕ ಆತ್ಮಹತ್ಯೆ
Update: 2019-05-11 23:14 IST
ಮಂಡ್ಯ, ಮೇ 11: ಸಾಲದ ಸುಳಿಗೆ ಸಿಲುಕಿ ನೇಣು ಬಿಗಿದುಕೊಂಡು ಆತ್ಮಹತ್ಯಗೆ ಯತ್ನಿಸಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿರುವ ಘಟನೆ ನಗರದ ಬೋವಿ ಕಾಲನಿಯಲ್ಲಿ ನಡೆದಿದೆ.
ಲೋಕೇಶ್(24) ಆತ್ಮಹತ್ಯೆ ಮಾಡಿಕೊಂಡವ. ವಾರದ ಹಿಂದೆ ನೇಣಿಗೆ ಯತ್ನಿಸಿದ್ದ ಅತನನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾನೆ.
ಐಪಿಎಲ್ ಬೆಟ್ಟಿಂಗ್ ದಂಧೆಗೆ ಸಿಲುಕಿದ್ದ ಲೋಕೇಶ್ ಸಾಲಗಾರನಾಗಿದ್ದ ಎನ್ನಲಾಗಿದೆ. ತನ್ನ ಕಣ್ಣುಗಳನ್ನು ದಾನ ಮಾಡುವಂತೆ ಸಾಯುವ ಮುನ್ನ ಹೇಳಿದ್ದರಿಂದ ಪೋಷಕರ ಕೋರಿಕೆ ಮೇರೆಗೆ ಮಿಮ್ಸ್ ವೈದ್ಯರು ಕಣ್ಣುಗಳನ್ನು ತೆಗೆದುಕೊಂಡರು.
ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.