ಕೊಳ್ಳೇಗಾಲ: ಬೈಕ್‍ ಕಳವು ಆರೋಪಿಯ ಬಂಧನ

Update: 2019-05-13 17:51 GMT

ಕೊಳ್ಳೇಗಾಲ, ಮೇ.13: ವಿವಿಧೆಡೆ ಬೈಕ್‍ ಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಪಟ್ಟಣ ಪೊಲೀಸರು ಬಂಧಿಸಿದ್ದಾರೆ.

ಪಟ್ಟಣದ ಸಂತೇಬೀದಿಯ ಪ್ರಶಾಂತ್ ಅಲಿಯಾಸ್ ಪಾಪು (21) ಬಂಧಿತ ಆರೋಪಿ.

ಪಟ್ಟಣದ ಅಚ್ಗಾಳ್ ವೃತದ ಬಳಿ ಪಟ್ಟಣ ಪೊಲೀಸ್ ಠಾಣೆಯ ಉಪನೀರಿಕ್ಷಕಿ ತಮ್ಮ ತಂಡದೊಡನೆ ಬೈಕ್ ತಪಾಸಣೆ ನಡೆಸುವ ವೇಳೆಯಲ್ಲಿ ದೇವಾಂಗ ಪೇಟೆ ಕಡೆಯಿಂದ ಬೈಕ್ ನಲ್ಲಿ ಬಂದ ಯುವಕನನ್ನು ಅಡ್ಡಗಟ್ಟಿ ವಿಚಾರಿಸಿದಾಗ ಆತನ ಬಳಿ ಬೈಕ್‍ನ ಯಾವುದೇ ದಾಖಲಾತಿ ಇಲ್ಲದ್ದನ್ನು ಗಮನಿಸಿ ಆತನನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ಮಾಡಲಾಯಿತು. ವಿಚಾರಣೆ ವೇಳೆ ಬಸವೇಶ್ವರ ನಗರ ಗ್ರಾಮೀಣ ಒಕ್ಕೂಟದ ಮುಂದೆ ಮೇ.8 ರಂದು ಬಜಾಜ್ ಪಲ್ಸರ್ ಬೈಕ್ ಹಾಗೂ ಒಂದೂವರೆ ವರ್ಷದ ಹಿಂದೆ ಕಲಾಮಂಟಪದ ಬಳಿ ಹೀರೋ ಪ್ಯಾಷನ್ ಬೈಕ್ ಅನ್ನು ಕದ್ದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ. 

ಈ ಸಂಬಂದ ಬೈಕ್ ಮಾಲಕರು ಪಟ್ಟಣ ಪೊಲೀಸ್ ಠಾಣೆಗೆ ನೀಡಿದ ದೂರಿನ್ವಯ ಮುಂದಿನ ಕ್ರಮ ಕೈಗೊಂಡಿದ್ದಾರೆ. ಎರಡು ಬೈಕ್‍ಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News