ಮೈಸೂರು: ವಯೋವೃದ್ಧ ದಂಪತಿಯ ಬರ್ಬರ ಕೊಲೆ
Update: 2019-05-14 13:37 IST
ಮೈಸೂರು: ವಯೋವೃದ್ಧ ದಂಪತಿಯನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಮೈಸೂರಿನ ನಾಗವಾಲದ ತೋಟದ ಮನೆಯಲ್ಲಿ ಸೋಮವಾರ ತಡ ರಾತ್ರಿ ನಡೆದಿದೆ.
ಮೃತರನ್ನು ವೀರಣ್ಣ (80) ಪತ್ನಿ ಶಿವಮ್ಮ(75) ಎಂದು ಗುರುತಿಸಲಾಗಿದೆ.
ಮೈಸೂರು-ಹುಣಸೂರು ರಸ್ತೆಯ ನಾಗವಾಲ ಬಳಿಯ ತೋಟದ ಮನೆಯಲ್ಲಿ ಕೃತ್ಯ ನಡೆದಿದ್ದು, ಈ ದಂಪತಿ ತೋಟದ ಮನೆಯಲ್ಲಿ ಇದ್ದ ಸೆಂಟ್ರಿಂಗ್ ಸಾಮಗ್ರಿಗಳನ್ನು ನೋಡಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.
ಮೃತ ದಂಪತಿಗೆ ನಾಲ್ವರು ಪುತ್ರಿಯರು ಹಾಗು ಓರ್ವ ಪುತ್ರ ಇದ್ದಾರೆ.
ಘಟನೆಗೆ ಕಾರಣ ತಿಳುದು ಬಂದಿಲ್ಲ. ಈ ಸಂಬಂಧ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.