ನನ್ನ ಮುಂದಿನ ದಿನಗಳು ಕೋಲಾರ ಜನತೆಯ ಸೇವೆಗೆ ಮೀಸಲು: ಸಮಾಜ ಸೇವಕ ಶ್ರೀಧರ ರೆಡ್ಡಿ

Update: 2019-05-14 18:03 GMT

ಕೋಲಾರ: ಜನ ಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುವುದೇ ನಿಜವಾದ ಜನಸೇವೆ, ನನ್ನ ಮುಂದಿನ ದಿನಗಳು ಕೋಲಾರ ಜನತೆಯ ಸೇವೆಗೆ ಮೀಸಲು ಎಂದು ಸಮಾಜ ಸೇವಕ ಶ್ರೀಧರರೆಡ್ಡಿ ತಿಳಿಸಿದ್ದಾರೆ. 

ನಗರದ ಎಸ್.ಎನ್.ಆರ್. ಸರ್ಕಲ್ ಬಳಿ ಇರುವ ಅಂಬೇಡ್ಕರ್ ಪುತ್ಥಳಿಗೆ ಪುಷ್ಪಮಾಲೆ ಹಾಕಿದ ನಂತರ, ಗಾಂಧಿನಗರಕ್ಕೆ ಬೇಟಿ ನೀಡಿ ಅಲ್ಲಿನ ಮೂಲಭೂತ ಸಮಸ್ಯೆಗಳ ಕುರಿತು ಸ್ಥಳೀಯ ಜನರಿಂದ ಮಾಹಿತಿ ಪಡೆದುಕೊಂಡರು.

ಹಲವು ಸ್ತ್ರೀಶಕ್ತಿ ಗುಂಪುಗಳ ಜೊತೆಗೆ ಮಾತನಾಡಿ ಮಹಿಳಾ ಸಂಘಗಳ ಅಭಿವೃದ್ಧಿಗೂ ಸಹಕರಿಸುವ ಭರವಸೆ ನೀಡಿದರು. ಬೆಂಗಳೂರಿನಂತಹ ಬೃಹತ್ ನಗರಕ್ಕೆ ಸಮೀಪವಿರುವ ಕೋಲಾರ ಜಿಲ್ಲಾ ಕೇಂದ್ರ ಇನ್ನೂ ಅಭಿವೃದ್ಧಿ ಹೊಂದಬೇಕಿದೆ. ಇಲ್ಲಿ ಹಲವಾರು ಸಮಸ್ಯೆಗಳು ಇದ್ದು, ಅವುಗಳ ನಿವಾರಣೆ ಮಾಡುವ ಮೂಲಕ ಅಭಿವೃದ್ಧಿ ಮಾಡಲು ಜನರು ಸಹಕಾರ ಕೊಡಬೇಕು ಎಂದರು. 

ಸಾರ್ವಜನಿಕರ ಸೇವೆ ಮಾಡುವ ಉದ್ದೇಶದಿಂದ ಕೋಲಾರಕ್ಕೆ ಬಂದಿರುವೆ. ನನಗೆ ಸೇವೆ ಮಾಡಲು ಜನತೆ ಕೈಜೋಡಿಸಲು ಮನವಿ ಮಾಡಿದರು.  ತದನಂತರ ಅಂಬೇಡ್ಕರ್ ನಗರದ ಕೆಲವು ಮುಖಂಡರು, ಭೋವಿ ಜನಾಂಗದ ಮುಖಂಡರಾದ ಶ್ರೀಕೃಷ್ಣ ಅವರನ್ನು ಬೇಟಿ ಮಾಡಿ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಕನ್ನಡ ಸಂಘದ ಹಳ್ಳಿಮನೆ ಸೋಮಣ್ಣ, ಮುಖಂಡರಾದ ಬಣಕನಹಳ್ಳಿ ನಟರಾಜ್, ಗಾಂಧೀನಗರ ಚಂದ್ರಕುಮಾರ್, ಅಂಬೇಡ್ಕರ್ ನಗರ ಸೋಮಣ್ಣ, ಮತ್ತಿಕುಂಟೆ ಕೃಷ್ಣಪ್ಪ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News