ಹನೂರು ಪ.ಪಂ. ಚುನಾವಣೆ: 39 ನಾಮಪತ್ರಗಳು ಸಲ್ಲಿಕೆ

Update: 2019-05-16 17:31 GMT

ಹನೂರು, ಮೇ 16: ಮೇ 29ರಂದು ನಡೆಯುವ ಪಟ್ಟಣ ಪಂಚಾಯತ್ ಚುನಾವಣೆಗೆ ಗುರುವಾರ ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಬಿಎಸ್ಪಿ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳು 39 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಪಟ್ಟಣದ ಉನ್ನತೀಕರಿಸಿದ ಮಾದರಿ ಸರ್ಕಾರಿ ಶಾಲೆಯಲ್ಲಿ ತೆರೆಯಲಾಗಿದ್ದ ಚುನಾವಣಾ ಕಚೇರಿಯಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷದಿಂದ ಹಿಂದುಳಿದ ವರ್ಗಕ್ಕೆ ಮೀಸಲಾಗಿರುವ 1ನೇ ವಾರ್ಡಿಗೆ ಶಶಿಕಲಾ, ಮಾಮ್ತಾಜ್ ಭಾನು, ಚಿಕ್ಕತಾಯಮ್ಮ ನಾಮಪತ್ರ ಸಲ್ಲಿಸಿದರೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ 2ನೇ ವಾರ್ಡಿಗೆ ಸುದೇಶ್ ಎಸ್.ಮಣಿ, ನಾಗರಾಜು ಹಾಗೂ ಗುರುಸ್ವಾಮಿ ನಾಮಪತ್ರ ಸಲ್ಲಿಸಿದರು. ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ 3ನೇ ವಾರ್ಡಿಗೆ ಆರ್. ಮೂರ್ತಿನಾಯ್ಡು, ಸಾಮಾನ್ಯ ಮಹಿಳೆಗೆ ಮೀಸಲಾಗಿರುವ 4ನೇ ವಾರ್ಡಿಗೆ ಮಂಜುಳಾ, ರುಕ್ಮಿಣಿ, ಹಾಗೂ ಚಂದ್ರಕಲಾ, ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿರುವ 5ನೇ ವಾರ್ಡಿಗೆ ರೂಪ, ರಾಜಮಣಿ ಸಾವಿತ್ರಮ್ಮ ಮಹದೇವಮ್ಮ ನಾಮಪತ್ರ ಸಲ್ಲಿಸಿದರು.

ಇನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ 6ನೇ ವಾರ್ಡಿಗೆ ಅಂಕಚಾರಿ ಹೇಮಂತ್‍ ಕುಮಾರ್, ಮಹೇಶ್‍ ನಾಯ್ಕ ಹಾಗೂ ರಾಜೇಶ್‍ ಚಾರಿ ಸಾಮಾನ್ಯ ಮಹಿಳೆಗೆ ಮೀಸಲಾಗಿರುವ 7ನೇ ವಾರ್ಡಿಗೆ ಪವಿತ್ರ, ಪ್ರೇಮ, ಪಾಪತಮ್ಮ, ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ 8ನೇ ವಾರ್ಡಿಗೆ ಆನಂದ್‍ ಕುಮಾರ್, ವಾಸುದೇವ, ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ 9ನೇ ವಾರ್ಡಿಗೆ ಗಿರೀಶ್, ಮಂಜೇಶ್, ನಿಂಗೇಗೌಡ, ಮಹದೇವಸ್ವಾಮಿ ನಾಮಪತ್ರ ಸಲ್ಲಿಸಿದ್ದಾರೆ.

ಅಲ್ಲದೇ ಹಿಂದುಳಿದ ವರ್ಗಕ್ಕೆ (ಎ) ಮೀಸಲಾಗಿರುವ 10ನೇ ವಾರ್ಡಿಗೆ ಮೋಹನ್‍ ಕುಮಾರ್, ಪರಿಶಿಷ್ಟ ಜಾತಿಗೆ ಮೀಸಲಾಗಿರುವ 11ನೇ ವಾರ್ಡಿಗೆ ಸಂಪತ್‍ ಕುಮಾರ್, ಕೆ. ಪ್ರಸನ್ನಕುಮಾರ್, ಮಹದೇವ, ಸಂತೋಷ್ ಸಾಮಾನ್ಯ ಮಹಿಳೆಗೆ ಮೀಸಲಾಗಿರುವ 12ನೇ ವಾರ್ಡಿಗೆ ಚಂದ್ರಮ್ಮ, ಮೀನಾಕ್ಷಿ, ಉರ್ಮತ್‍ ಬಾನು ಹಾಗೂ ಪರಿಶಿಷ್ಟಜಾತಿಗೆ ಮೀಸಲಾಗಿರುವ 13ನೇ ವಾರ್ಡಿಗೆ ಲಿಂಗಾಮೃತಸ್ವಾಮಿ, ಮಹೇಶ್ ನಾಮಪತ್ರ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News