ಬಾಗೇಪಲ್ಲಿ ಪುರಸಭೆ ಚುನಾವಣೆ: 74 ನಾಮಪತ್ರ ಸಲ್ಲಿಕೆ

Update: 2019-05-17 17:08 GMT

ಬಾಗೇಪಲ್ಲಿ: ಪುರಸಭೆ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾದ ಇಂದು 23 ವಾರ್ಡ್‍ಗಳಲ್ಲಿ 74 ನಾಮ ಪತ್ರಗಳು ಸಲ್ಲಿಕೆಯಾಯಿತು.

ಕಾಂಗ್ರೆಸ್, ಸಿಪಿಐಂ, ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ತಮಟೆ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿ ಮುಖ್ಯರಸ್ತೆಯಲ್ಲಿ ಪಟಾಕಿ ಸಿಡಿಸಿ ಬಂದು ನಾಮಪತ್ರ ಸಲ್ಲಿಸಿದರೆ ಕೆಲವು ಅಭ್ಯರ್ಥಿಗಳು ಸೂಚಕರ ಜತೆ ಆಗಮಿಸಿ ನಾಮ ಪತ್ರ ಸಲ್ಲಿಸಿದರು.

ಬೆಳಗ್ಗೆ 11 ಗಂಟೆಗೆ ಅಭ್ಯರ್ಥಿಗಳು ನಾಮ ಪತ್ರಗಳನ್ನು ಸಲ್ಲಿಸಲು ಆಗಮಿಸಿದಾಗ ನೂಕುನುಗ್ಗಲಿನ ವಾತಾವರಣ ನಿರ್ಮಾಣವಾಯಿತು. ಕೊನೆಗೆ ಅಭ್ಯರ್ಥಿಗಳು ಕ್ಯೂನಲ್ಲಿ ನಿಂತು ನಾಮ ಪತ್ರಗಳನ್ನು ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News