ಮೈಸೂರು: ಶೂಟೌಟ್ ಪ್ರಕರಣದ ತನಿಖೆ ಸಿಐಡಿಗೆ ಹಸ್ತಾಂತರ

Update: 2019-05-17 17:53 GMT
ಸಾಂದರ್ಭಿಕ ಚಿತ್ರ

ಮೈಸೂರು,ಮೇ.17: ಹಣ ದುಪ್ಪಟ್ಟು ಮಾಡುವ ಆರೋಪದ ಮೇಲೆ ಮೈಸೂರಿನಲ್ಲಿ ನಡೆದಿದ್ದ ಶೂಟೌಟ್ ಪ್ರಕರಣವನ್ನು ಇದೀಗ ಸಿಐಡಿಗೆ ಹಸ್ತಾಂತರಿಸಲಾಗಿದೆ.

ಶೂಟ್ ಔಟ್ ಕೇಸ್ ನ್ನು ಸಿಐಡಿ ಗೆ ಈಗಾಗಲೇ ಹಸ್ತಾಂತರಿಸಿ ಆದೇಶ ಹೊರಡಿಸಲಾಗಿದೆ. ಇಂದು ಸಂಜೆ ಸಿಐಡಿ ತಂಡ ಮೈಸೂರಿಗೆ ಆಗಮಿಸಿದೆ. ಸುಪ್ರೀಂಕೋರ್ಟ್ ಗೈಡ್ ಲೈನ್ ಪ್ರಕಾರ ಶೂಟ್ ಔಟ್ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಬೇಕಾಗಿದ್ದು, ಅದರಂತೆ ಸಿಐಡಿ ತನಿಖೆಗೆ ವಹಿಸಲಾಗಿದೆ. 

ಸಿಐಡಿ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ಈಗಾಗಲೇ ಅವರು ಕಾರ್ಯಚರಣೆಗೆ ಇಳಿದಿದ್ದಾರೆ. ಮೊದಲಿಗೆ ದಂಧೆಕೋರರು ತಂಗಿದ್ದ ಹೋಟೆಲ್ ಗೆ ಭೇಟಿ ನೀಡದ ತಂಡ ಮಾಹಿತಿ ಪಡೆದಿದೆ. ನಂತರ ಇನ್ಸ್‍ಪೆಕ್ಟರ್ ಬಿ.ಜಿ.ಕುಮಾರ್ ಅವರನ್ನು ವಿಚಾರಣೆಗೊಳಪಡಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರು ಇದ್ದಾರೆ ಎಂಬುದನ್ನು ತನಿಖೆ ವೇಳೆ ಸಿಐಡಿ ತಂಡ ತಿಳಿದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News