'ಸರಕಾರ ವಿಸರ್ಜನೆ' ಕುರಿತ ಹೊರಟ್ಟಿ ಹೇಳಿಕೆಗೆ ಎಚ್.ವಿಶ್ವನಾಥ್ ಹೇಳಿದ್ದೇನು ?

Update: 2019-05-18 14:21 GMT

ಬೆಂಗಳೂರು, ಮೇ 18: 'ಮೈತ್ರಿ ಸರಕಾರದಲ್ಲಿನ ಗೊಂದಲಗಳು ಬಗೆಹರಿಯದಿದ್ದರೆ ಸರಕಾರವನ್ನು ವಿಸರ್ಜನೆ ಮಾಡುವುದು ಸೂಕ್ತ' ಎಂಬ ಜೆಡಿಸ್ ಮುಖಂಡ ಬಸವರಾಜ್ ಹೊರಟ್ಟಿ ಅವರ ಹೇಳಿಕೆ ವೈಯಕ್ತಿಕ ಅಭಿಪ್ರಾಯ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಅಥವಾ ಮೈತ್ರಿ ಸರಕಾರ ವಿಸರ್ಜನೆ ಎಂಬುದು ಬಹಳ ದೊಡ್ಡ ಮಾತಾಗುತ್ತದೆ. ಎರಡೂ ಪಕ್ಷಗಳಲ್ಲೂ ಹೈಕಮಾಂಡ್ ಇದ್ದು, ಈ ಬಗ್ಗೆ ಹಿರಿಯ ನಾಯಕರು ಕುಳಿತು ಚರ್ಚೆ ಮಾಡಲಿದ್ದಾರೆ ಎಂದು ಹೇಳಿದರು.

ಬಸವರಾಜ್ ಹೊರಟ್ಟಿ ಅವರಿಗೆ 40 ವರ್ಷಗಳ ಸುದೀರ್ಘ ರಾಜಕೀಯ ಅನುಭವ ಇದೆ. ಯಾವುದೋ ನೋವಿನಲ್ಲಿ ಅವರು ಮೈತ್ರಿ ಸರಕಾರದ ವಿಸರ್ಜನೆ ಬಗ್ಗೆ ಮಾತನಾಡಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯ. ಸಾರ್ವತ್ರಿಕವಾಗಿ ಅದನ್ನು ಅನ್ವಯಿಸಲು ಸಾಧ್ಯವಿಲ್ಲ ಎಂದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಸಮನ್ವಯ ಸಮಿತಿ ಮಾಜಿ ಸಿಎಂ ಸಿದ್ದರಾಮಯ್ಯನವರ ಸಮಿತಿಯಾಗಿದೆ. ಸಮಿತಿಯಲ್ಲಿ ಉಭಯ ಪಕ್ಷಗಳ ಅಧ್ಯಕ್ಷರಿಲ್ಲ. ಈ ಸಮಿತಿ ರಚನೆ ಮಾಡಿರುವುದು ಯಾವುದೋ ವ್ಯಕ್ತಿಯ ಇಷ್ಟ-ಕಷ್ಟಕ್ಕೆ ರಚನೆ ಮಾಡಿಲ್ಲ ಎಂದು ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News