ವಿಷ ನೀಡಿದ ಪ್ರೇಯಸಿ: ಡೆತ್ ನೋಟ್ ಬರೆದಿಟ್ಟು ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೈದ ಯುವಕ

Update: 2019-05-18 16:22 GMT

ಮೈಸೂರು,ಮೇ.18: ಪ್ರಿಯಕರನನ್ನು ಸಾಯಿ ಎಂದು ಆತನ ಪ್ರಿಯತಮೆ ವಿಷ ನೀಡಿದ್ದು, ಅದೇ ವಿಷ ಸೇವಿಸಿ ಪ್ರಿಯಕರ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ನಂಜನಗೂಡಿನ ಕಸುವಿನಹಳ್ಳಿಯಲ್ಲಿ ನಡೆದಿದೆ.

ಕಸುವಿನಳ್ಳಿಯ ಸಿದ್ದರಾಜು ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಸೆಲ್ಫಿ ವಿಡಿಯೋ ಮಾಡಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಳವಾಡಿಯಲ್ಲಿ ಸಿದ್ದರಾಜು ಹಾಗೂ ಭಾವನಾ ಕೆಲಸ ಮಾಡುತ್ತಿದ್ದು, ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಮದುವೆಗೆ ಯುವತಿಯ ಪೋಷಕರ ವಿರೋಧ ಇತ್ತು ಎನ್ನಲಾಗಿದ್ದು, ಇತ್ತೀಚೆಗೆ ಭಾವನಾ ಮತ್ತೊಬ್ಬನೊಂದಿಗೆ ವಿವಾಹವಾಗುತ್ತಿರುವ ಬಗ್ಗೆ ಸಿದ್ದರಾಜುಗೆ ತಿಳಿಸಿದ್ದು, ಹೀಗಾಗಿ ಸಿದ್ದರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

'ನನ್ನ ಸಾವಿಗೆ ಭಾವನಾ ಹಾಗೂ ಆಕೆಯ ತಾಯಿ ಹಾಗೂ ಅಜ್ಜಿ ಕಾರಣ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದು, ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ಬರೆಸಿ ಭಾವನಾ ವಿಷ ಕೊಟ್ಟಳು ಎಂದು ಸಿದ್ದರಾಜು ಹೇಳಿಕೊಂಡಿದ್ದಾನೆ. ಅಲ್ಲದೇ, ವಿಡಿಯೋದಲ್ಲಿ ಡೆತ್ ನೋಟ್ ಪ್ರದರ್ಶಿಸಿದ್ದಾನೆ ಎನ್ನಲಾಗಿದೆ.

'ನನ್ನ ಹೆಸರು ಬಹಿರಂಗಪಡಿಸದಂತೆ ಭಾವನಾ ಮನವಿ ಮಾಡಿದ್ದಾಳೆ. ನನ್ನನ್ನು ಪ್ರೀತಿಸಿ ಮತ್ತೊಬ್ಬನೊಂದಿಗೆ ವಿವಾಹವಾಗುತ್ತಿರುವ ಬಗ್ಗೆ ನೋವು ಹಂಚಿಕೊಂಡಿದ್ದು, ಅವಳಿಗೆ ಮದುವೆ ಆಗಬಾರದು, ಜೈಲಿಗೆ ಹೋಗಬೇಕೆಂದು' ವಿಡಿಯೋದಲ್ಲಿ ಸಿದ್ದರಾಜು ಮನವಿ ಮಾಡಿಕೊಂಡಿದ್ದಾನೆ.  

ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News