ಮಲೆಬೆನ್ನೂರ: ಕಾಲುವೆಗೆ ಸ್ನಾನಕ್ಕಿಳಿದ ಬಾಲಕ ಮೃತ್ಯು
Update: 2019-05-19 11:20 IST
ದಾವಣಗೆರೆ, ಮೇ 19: ಭದ್ರಾ ಕಾಲುವೆಯಲ್ಲಿ ಸ್ನಾನಕ್ಕಿಳಿದ ಬಾಲಕನೋರ್ವ ಮುಳುಗಿ ಮೃತಪಟ್ಟ ಘಟನೆ ಹರಿಹರ ತಾಲೂಕಿನ ಮಲೇಬೆನ್ನೂರ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಮೃತರನ್ನು ಮಂಜುನಾಥ್(17) ಎಂದು ಗುರುತಿಸಲಾಗಿದೆ.
ಕಾಲುವೆಯಲ್ಲಿ ಸ್ನಾನಕ್ಕೆಂದು ನೀರಿಗೆ ಹಾರಿದ ಮಂಜುನಾಥ್‌ರ ತಲೆ ಕಾಲುವೆಯ ಕಟ್ಟೆಗೆ ತಾಗಿತೆನ್ನಲಾಗಿದೆ. ಇದರಿಂದ ಗಂಭೀರ ಗಾಯಗೊಂಡ ಮಂಜುನಾಥ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮಂಜುನಾಥ್ ಹರಿಹರ ಸರಕಾರಿ ಐಟಿಐ ಕಾಲೇಜು ವಿದ್ಯಾರ್ಥಿಯಾಗಿದ್ದರು.
ಘಟನೆಯ ಬಗ್ಗೆ ಮಲೇಬೆನ್ನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.