ಫಿಲ್ಟರ್ ಮರಳು ಘಟಕಗಳ ಮೇಲೆ ಪೊಲೀಸರ ದಾಳಿ

Update: 2019-05-20 16:52 GMT

ರಾಮನಗರ, ಮೇ 20: ಜಿಲ್ಲೆಯ ವಿವಿಧ ಕಡೆಗಳಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಫಿಲ್ಟರ್ ಮರಳು ಘಟಕಗಳ ಮೇಲೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಸೂಚನೆ ಮೇರೆಗೆ ಜಿಲ್ಲಾ ಪೊಲೀಸ್ ಅಧಿಕಾರಿಗಳ ತಂಡ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ತಂಡ ದಾಳಿ ನಡೆಸಿತು.

ಚನ್ನಪಟ್ಟಣ ತಾಲೂಕಿನ ರೂಪಾಕ್ಷಿಪುರ, ಕಾಡಾಕನಹಳ್ಳಿ, ಗೀಜಗನದಾಸದೊಡ್ಡಿ, ರಾಮನಗರ ತಾಲೂಕಿನ ಕೈಲಾಂಚ, ಅರಳಾಳುಸಂದ್ರ, ಗೆಂಡೇಕೆರೆ, ನಾಗೋಹಳ್ಳಿ ಹಾಗೂ ಮುಂತಾದ ಕಡೆ ಅಕ್ರಮ ಫಿಲ್ಟರ್ ಮರಳು ಘಟಕಗಳ ಮೇಲೆ ದಾಳಿ ನಡೆಸಲಾಯಿತು.

ಫಿಲ್ಟರ್ ಮರಳು ತಯಾರಿಸಿ ಸಾಗಣಿಕೆ ಮಾಡಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಸಭೆ ನಡೆಸಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ.ರಮೇಶ್, ಪೊಲೀಸ್ ಸಿಬ್ಬಂದಿಗೆ ನಿರ್ದೇಶನ ನೀಡಿ ಅಕ್ರಮವೆಸಗಿದವರ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ತಿಳಿಸಿದ್ದರು. ದಾಳಿಯ ನೇತೃತ್ವವನ್ನು ಜಿಲ್ಲಾ ಭೂ ವಿಜ್ಞಾನ ಮತ್ತು ಗಣಿ ಇಲಾಖೆಯ ಉಪನಿರ್ದೇಶಕಿ ಡಾ.ಪುಷ್ಪಾ ವಹಿಸಿದ್ದರು. 6 ಜೆಸಿಬಿ ಯಂತ್ರಗಳನ್ನು ಬಳಸಿ ಫಿಲ್ಟರ್ ತೊಟ್ಟಿಗಳನ್ನು ನಾಶಪಡಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News